ಡಾ.ಅಂಬೇಡ್ಕರ್ ನಿಂದನೆ ಆರೋಪ: ಮೆಡಿಕಲ್ ಕಾಲೇಜು ಡೀನ್ ಕಾರು ಜಖಂ - Mahanayaka

ಡಾ.ಅಂಬೇಡ್ಕರ್ ನಿಂದನೆ ಆರೋಪ: ಮೆಡಿಕಲ್ ಕಾಲೇಜು ಡೀನ್ ಕಾರು ಜಖಂ

chamarajanagara
19/05/2023

ಚಾಮರಾಜನಗರ: ಡಾ.ಅಂಬೇಡ್ಕರ್ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ  ಮೆಡಿಕಲ್ ಕಾಲೇಜಿನ ಡೀನ್ ವಿರುದ್ಧ ಪ್ರತಿಭಟನೆ ನಡೆದಿದ್ದು, ಈ ವೇಳೆ ಡೀನ್ ಕಾರು ಜಖಂಗೊಂಡಿದೆ.

ಚಾಮರಾಜನಗರದ ಮೆಡಿಕಲ್ ಕಾಲೇಜು ಬಳಿ ಘಟನೆ ನಡೆದಿದೆ. ನಿನ್ನೆ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಸಂಬಳ ಕೇಳಲು ಹೋಗಿದ್ದ ವೇಳೆ ಡೀನ್ ಸಂಜೀವ್ ರೆಡ್ಡಿ ಅಂಬೇಡ್ಕರ್ ನಿಂದನೆ ಮಾಡಿದ್ದು, ಹೀಗಾಗಿ ಡೀನ್ ಸಂಜೀವ್ ರೆಡ್ಡಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ.

ಆಸ್ಪತ್ರೆ ಹೊರಗುತ್ತಿಗೆ ನೌಕರರು,ಬಿಎಸ್ಪಿ ಕಾರ್ಯಕರ್ತರಿಂದ ಡೀನ್ ಕಾರು ತಡೆದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರ ಆಕ್ರೋಶಕ್ಕೆ ಡೀನ್ ಸಂಜೀವ್ ರೆಡ್ಡಿ ಕಾರಿನ ಗಾಜು ಪುಡಿಪುಡಿಯಾಗಿದೆ.  ಪೊಲೀಸರ ರಕ್ಷಣೆಯೊಂದಿಗೆ ಕೊನೆಗೆ ಡೀನ್ ಸಂಜೀವ್ ರೆಡ್ಡಿ  ಹೊರಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ