ಅಂಬೇಡ್ಕರ್ ಅವಹೇಳನದ ವಿರುದ್ಧ ತೀವ್ರಗೊಂಡ ಹೋರಾಟ: ಜೈನ್ ಕಾಲೇಜಿನ ಬೋರ್ಡ್ ಗೆ ಮಸಿ ಬಳಿದ ಹೋರಾಟಗಾರರು - Mahanayaka
12:05 AM Wednesday 3 - September 2025

ಅಂಬೇಡ್ಕರ್ ಅವಹೇಳನದ ವಿರುದ್ಧ ತೀವ್ರಗೊಂಡ ಹೋರಾಟ: ಜೈನ್ ಕಾಲೇಜಿನ ಬೋರ್ಡ್ ಗೆ ಮಸಿ ಬಳಿದ ಹೋರಾಟಗಾರರು

jain
13/02/2023


Provided by

ಬೆಂಗಳೂರು:  ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿರುವುದನ್ನು ವಿರೋಧಿಸಿ ಎನ್ ಎಸ್ ಯುಐ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳು ಜೈನ್ ಕಾಲೇಜಿನ ಬೋರ್ಡ್ ಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿರುವ ಜೈನ್ ಯುನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್ ಮೆಂಟ್  ಸ್ಟಡೀಸ್ ನ 6 ವಿದ್ಯಾರ್ಥಿಗಳು ದಲಿತರಿಗೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಪದಗಳನ್ನು ಬಳಸಿ ಸ್ಕಿಟ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ವಿವಾದ ಸೃಷ್ಟಿಯಾಗಿದೆ.

ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಸ್ಕಿಟ್ ಮಾಡಿರುವ 6 ವಿದ್ಯಾರ್ಥಿಗಳನ್ನು ಅಮಾನತು ಮಾಡಿ, ಕ್ಷಮೆಯಾಚಿಸಿ ಕೈತೊಳೆದುಕೊಂಡಿದ್ದಾರೆ. ಇಂತಹ ಸ್ಕಿಟ್ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವವರು ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮೇಲೆ ಯಾವುದೇ ಕ್ರಮಗಳು ಆಗಿಲ್ಲ.

ಘಟನೆ ಸಂಬಂಧ ರಾಜ್ಯಾದ್ಯಂತ ವಿವಿಧೆಡೆಗಳಲ್ಲಿ ಜೈನ್  ಕಾಲೇಜಿನ ವಿರುದ್ಧ ದೂರು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಕೂಡ ದೂರು ದಾಖಲಾಗಿದ್ದು, ದಲಿತ ಸಂಘಟನೆಯ ಅಕ್ಷಯ್ ಬನ್ಸೋಡೆ ಅವರು ನಾಂದೇಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ