ಇಂಟರ್ವ್ಯೂ ಮುಗಿಸಿ ಬರುತ್ತಿದ್ದವನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ: ಯುವಕನ ಕುತ್ತಿಗೆಗೆ ಗಾಯ - Mahanayaka

ಇಂಟರ್ವ್ಯೂ ಮುಗಿಸಿ ಬರುತ್ತಿದ್ದವನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ: ಯುವಕನ ಕುತ್ತಿಗೆಗೆ ಗಾಯ

trafick police
09/02/2022


Provided by

ಬೆಂಗಳೂರು: ಇಂಟರ್ ವ್ಯೂ ಮುಗಿಸಿ ಬರುತ್ತಿದ್ದ ಯುವಕನ ಮೇಲೆ, ದಂಡ ಪಾವತಿಸಿಲ್ಲ ಎಂಬ ಆರೋಪ ಹೊರಿಸಿ ಸಂಚಾರಿ ಪೊಲೀಸರೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಘಟನೆಯ ಪರಿಣಾಮ ಯುವಕನ ಕುತ್ತಿಗೆಗೆ ಗಾಯವಾಗಿದೆ ಎಂದು ವರದಿಯಾಗಿದೆ.

ವಿಜಯನಗರ ಸಂಚಾರಿ ಪೊಲೀಸರು ಈ ಕೌರ್ಯ ಮೆರೆದಿದ್ದಾರೆನ್ನಲಾಗಿದ್ದು, ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿ ಮಾಡುವಂತೆ  ಪೊಲೀಸರು ಯುವಕನಿಗೆ ಸೂಚಿಸಿದ್ದು, ಆದರೆ, ತನ್ನ ಬಳಿ ಈಗ ಹಣ ಇಲ್ಲ, ನಾನು ಕೋರ್ಟ್ ನಲ್ಲಿ ಹಣ ಪಾವತಿಸುವುದಾಗಿ ಯುವಕ ಮನವಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ವೇಳೆ ಕೋಪಗೊಂಡ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಅವಾಚ್ಯ ಶಬ್ದಗಳಿಂದ ಯುವಕನನ್ನು ನಿಂದಿಸಿ, ಥಳಿಸಿ ಬೆದರಿಕೆ ಹಾಕಿದ್ದಾರೆ. ಹಲ್ಲೆಯ ಪರಿಣಾಮ ಯುವಕನ ಕುತ್ತಿಗೆಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಇನ್ನೂ ಹಲ್ಲೆ ನಡೆಸಿದ ಬಳಿಕ ಯುವಕನದ್ದೇ ತಪ್ಪು ಎಂದು ಮುಚ್ಚಳಿಕೆ ಬರೆಸಿಕೊಂಡು ಯುವಕ ಮಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಲಾರಿ ಚಾಲಕ ಸಾವು

ಮನೆಗೋಡೆ ಕುಸಿದು ಕಾರ್ಮಿಕ ಸ್ಥಳದಲ್ಲೇ ಸಾವು

ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಪರಾರಿಯಾದ ಬೈಕ್: ಮಹಿಳೆ ಸಾವು

ಉದ್ಯೋಗದ ಆಮಿಷ: ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಮೂವರ ಬಂಧನ

ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣ: ಹಂತಕಿಯ ಬಂಧನ

 

ಇತ್ತೀಚಿನ ಸುದ್ದಿ