ರಾಹುಲ್ ಗಾಂಧಿಗೆ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲು ಅಯೋಧ್ಯೆ ಶ್ರೀಗಳಿಂದ ಆಹ್ವಾನ

ಕೇಂದ್ರ ಸರ್ಕಾರವು ರಾಹುಲ್ ಗಾಂಧಿಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ಅವರಿಗೆ ಮನೆ ನೀಡಲು ಅನೇಕರು ಮುಂದಾಗಿದ್ದಾರೆ.
ಹನುಮಾನ್ ಘರಿ ದೇವಸ್ಧಾನದ ದರ್ಶಕ ಮಹಂತ್ ಸಂಜಯ್ ದಾಸ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಯೋಧ್ಯ ದೇವಸ್ಥಾನದ ಆವರಣದಲ್ಲಿ ಸನ್ಯಾಸಿಗಳೊಂದಿಗೆ ವಾಸ್ತವ್ಯ ಹೂಡುವಂತೆ ಆಹ್ವಾನಿಸಿದ್ದಾರೆ.
2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲೇ ಲೋಕಸಭಾ ಸಚಿವಾಲಯವು ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು ಮಾತ್ರವಲ್ಲದೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು.
“ನಾವು ರಾಹುಲ್ ಗಾಂಧಿಯನ್ನು ಹನುಮಾನ್ಘರಿ ಮತ್ತು ಅಯೋಧ್ಯೆಗೆ ಆಹ್ವಾನಿಸುತ್ತೇವೆ. ಅವರು ಇಲ್ಲಿಗೆ ಬಂದರೆ ನಾವು ಅವರಿಗೆ ನಮ್ಮ ಸ್ಥಾನವನ್ನು ನೀಡುತ್ತೇವೆ” ಎಂದು ಮಹಂತ್ ಸಂಜಯ್ ದಾಸ್ ಅವರು ಹೇಳಿದ್ದಾರೆ.
ಬಿಜೆಪಿ ಪ್ರಾಬಲ್ಯವಿರುವ ಅಯೋಧ್ಯೆಯಲ್ಲಿ ಶ್ರೀಗಳು ನೀಡಿರುವ ಈ ಆಹ್ವಾನವು ಕಾಂಗ್ರೆಸ್ ಗೆ ತೋರಿಸುವ ಬೆಂಬಲ ಎಂದು ಹಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw