RSS ಸಂಘಟನೆಯನ್ನು ಸ್ವಾತಂತ್ರ್ಯ ದಿನಾಚರಣೆಯ ದಿನ ಬಳಸಿಕೊಳ್ಳುವುದು ಸರಿಯೇ? - Mahanayaka

RSS ಸಂಘಟನೆಯನ್ನು ಸ್ವಾತಂತ್ರ್ಯ ದಿನಾಚರಣೆಯ ದಿನ ಬಳಸಿಕೊಳ್ಳುವುದು ಸರಿಯೇ?

pm modi
17/08/2025


Provided by

79 ನೇ ಸ್ವಾತಂತ್ರ್ಯ ದಿನಾಚರಣೆಯ ದಿನವನ್ನು  ಕೆಂಪುಕೋಟೆಯಲ್ಲಿ ದುರುಪಯೋಗ ಮಾಡಿಕೊಂಡ ದೇಶದ ಮೊಟ್ಟ ಮೊದಲ ಪ್ರಧಾನ ಮಂತ್ರಿ  ನರೇಂದ್ರ ಮೋದಿಜಿಯವರು . ಕಾರಣ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಪ್ರಧಾನಮಂತ್ರಿಯ ಸ್ಥಾನವನ್ನು ಬಿಟ್ಟು ಕೊಡಬೇಕೆಂಬ ಹತಾಶೆಯದಿಂದ ಕಳೆದ 12 ವರ್ಷಗಳಿಂದ  ಎಂದೂ ಆರ್ .ಎಸ್. ಎಸ್. ಅನ್ನು  ಸ್ವಾತಂತ್ರ್ಯ ದಿನಾಚರಣೆಯಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು  ಮಾತನಾಡಿಲ್ಲ, ಮತ್ತೆ ಹಲವು ಪ್ರಧಾನ ಮಂತ್ರಿಗಳು ಸಹ  ಸ್ವಾತಂತ್ರ್ಯ  ದಿನಾಚರಣೆಯಲ್ಲಿ  ಯಾವುದೇ ಎನ್‌ ಜಿಒ ಸಂಸ್ಥೆಗಳ ಬಗ್ಗೆ ಮಾತನಾಡಿರಲಿಲ್ಲ, ಆದರೆ ದುರ್ದೈವ ಇವತ್ತು  ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು  ಆರ್ ಎಸ್ ಎಸ್ ಸಂಘಟನೆಗೆ ಪ್ರಧಾನಮಂತ್ರಿಯಾಗಿದ್ದರೋ ಅಥವಾ ದೇಶದ 140 ಕೋಟಿ ಜನಸಂಖ್ಯೆಯುಳ್ಳ  ದೇಶದ ಪ್ರಧಾನಮಂತ್ರಿಯಾಗಿದ್ದರೋ ಎಂದು ತಿಳಿಯುತ್ತಿಲ್ಲ. ಕಾರಣ ಆರ್ ಎಸ್ ಎಸ್ ಸಂಘಟನೆಯನ್ನು  ವಿಶ್ವದ ಅತಿ ದೊಡ್ಡ ಸಂಘಟನೆ ಎಂದು ಕೆಂಪುಕೋಟೆಯಲ್ಲಿ  ಹಾಡಿ ಹೊಗಳಿದ್ದಾರೆ.

ಯಾವತ್ತೂ ಆರ್. ಎಸ್. ಎಸ್. ಸಂಘಟನೆಯು  ದೇಶದ ಸಕಲ ಧರ್ಮಗಳ  ಸಮಾನತೆ, ಜಾತ್ಯಾತೀತವಾಗಿ, ಸೌಹಾರ್ದತೆಗಾಗಿ, ಸಂವಿಧಾನದ ಆಶಯಗಾಗಿ ಆರ್ ಎಸ್ ಎಸ್ ಸಂಘಟನೆಯ ಸಿದ್ಧಾಂತವಿಲ್ಲ, ಆರ್ ಎಸ್ ಎಸ್  ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ದ  ನಂತರದ ದಿನಗಳಲ್ಲೂ ಸಹ  ದೇಶದ ಸೌಹಾರ್ಧರ್ತೆಗಾಗಿ ಎಲ್ಲಾ ಧರ್ಮಗಳನ್ನು ಗೌರವಿಸುವ ಆಶಯಗಳ ವಿರುದ್ಧ  ಸಂಘಟನೆ ಮಾಡಿದೆಯೇ ಹೊರತು  ದೇಶಕ್ಕೋಸ್ಕರ ಪ್ರಾಣತ್ಯಾಗವನ್ನು ಮಾಡಿರಲಿಲ್ಲ. ಆರ್ ಎಸ್ ಎಸ್ ಸಂಘಟನೆಯು  ಅಸಮಾನತೆಯ ವಿರುದ್ಧ, ದೀನದಲಿತರ ಶೋಷಣೆ ವಿರುದ್ಧ, ದೌರ್ಜನ್ಯಗಳ ವಿರುದ್ಧ,ಅತ್ಯಾಚಾರಿಗಳ ವಿರುದ್ದ, ಧರ್ಮ ಧರ್ಮಗಳ ನಡುವೆ ಸೌಹಾರ್ದತೆ,  ಸಮಾನತೆಗೋಸ್ಕರ, ಜಾತಿಯ ವ್ಯವಸ್ಥೆಯ ನಿರ್ಮೂಲನೆಯ  ವಿರುದ್ಧ, ದೇಶದ ಹಿಂದೂಗಳಲ್ಲಿರುವ  ಜಾತಿ ಜಾತಿಗಳ ನಡುವೆ ಇರುವ ಸಮಸ್ಯೆಗಳ ವಿರುದ್ಧ ಅಥವಾ ದಲಿತರ ಸಂರಕ್ಷಣೆಗೋಸ್ಕರ  ಯಾವತ್ತೂ ಇಂತಹ ಹೋರಾಟಗಳಾಗಲಿ  ಅಥವಾ ಅವರು ಹಕ್ಕು ಭಾದ್ಯತೆಗಳನ್ನು ಕೊಡಿಸುವ ಬಗ್ಗೆ ಆಗಲಿ   ಆರ್ ಎಸ್ ಎಸ್ ಸಂಘಟನೆ ದೇಶದಲ್ಲಿ ಇದುವರೆಗೂ ನಡೆದುಕೊಂಡಿಲ್ಲ  ಅಂತಹ ಹೋರಾಟಗಳೇ ಕಣ್ಮುಂದೆ ಕಾಣುತ್ತಿಲ್ಲ  ಇಂತಹ ದರಿದ್ರ ಆರ್ ಎಸ್ ಎಸ್  ಸಂಘಟನೆಯ  ಬಗ್ಗೆ  ದೇಶದ ಸ್ವಾತಂತ್ರ್ಯ  ದಿನಾಚರಣೆಯಲ್ಲಿ  ಹಾಡಿ ಹೊಗಳಿರೋದು  ವಿಪರ್ಯಾಸ! ಮತ್ತು ದೇಶದ ಸಂವಿಧಾನದ ವಿರುದ್ಧ  ಭಾಷಣವನ್ನು ಮಾಡಿದ್ದಾರೆ.

ಹಾಗೆಯೇ  ಇದೇ ಆರ್ ಎಸ್ ಎಸ್ ಸಂಘಟನೆಯು  ಸುಮಾರು 52 ವರ್ಷಗಳ ಕಾಲ  ತಮ್ಮ ಆರ್ ಎಸ್ ಎಸ್ ಸಂಘಟನೆಯ ಕಚೇರಿಯ ಮುಂದೆ  ಸ್ವಾತಂತ್ರ್ಯ  ದಿನಾಚರಣೆಯನ್ನಾಗಲಿ ಅಥವಾ ಭಾರತದ ದ್ವಜವನ್ನಾಗಲೀ ಹಾರಿಸುವ  ಪ್ರಯತ್ನವನ್ನು ಎಂದೂ ಮಾಡಲಿಲ್ಲ  ಮತ್ತು ಇಂದಿಗೂ ದೇಶದ ಸಂವಿಧಾನದ ವಿರುದ್ಧ  ಮತ್ತು ಸಂವಿಧಾನದ ಪೀಠಿಕೆಯ ವಿರುದ್ಧ  ಆರ್ ಎಸ್ ಎಸ್ ಸಂಘಟನೆಯ ಮುಖಂಡರುಗಳು  ಹಲವು ಸಾರ್ವಜನಿಕ ಭಾಷಣಗಳಲ್ಲಿ  ಈ ದೇಶದ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ , ಪೀಠಿಕೆಯನ್ನು ಗೌರವಿಸುವುದಿಲ್ಲ ಎಂದು ಮತ್ತು ದೇಶದ ಸಂವಿಧಾನವನ್ನು ನಾವು ಬದಲಾಯಿಸುತ್ತೇವೆ ಎಂದು ಹೇಳಿರುತ್ತಾರೆ . ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತುವ  ಇಂತಹ ಸಂಘಟನೆಯ ಬಗ್ಗೆ ಕೆಂಪುಕೋಟೆಯಲ್ಲಿ ಭಾಷಣ ಮಾಡಿರುವುದು  ನಮ್ಮ ದೇಶದ 140 ಕೋಟಿ ಜನರಿಗೆ ಮೋದಿಯವರು  ಮಾಡಿರುವ ಅವಮಾನ. ಹಾಗೆಯೆ ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು  ದೇಶಕ್ಕಾಗಿ ಪ್ರಾಣ ಕೊಟ್ಟವರನ್ನು ಮತ್ತು ಅಹಿಂಸೆ ಚಳುವಳಿಗಳ ಮೂಲಕ,  ಸತ್ಯಾಗ್ರಹಗಳ ಮೂಲಕ ಹೋರಾಟ ಮಾಡಿದವರನ್ನು ಹೊಗಳಬೇಕಿತ್ತು. ಅಲ್ಲದೆ  ಅಂತಹ ಹೋರಾಟಗಳಲ್ಲಿ  ಯಾವತ್ತಿಗೂ ಆರ್ ಎಸ್ ಎಸ್ ಸಂಘಟನೆ ಭಾಗಿಯಾಗಿಲ್ಲ, ಇಂತಹ ಸಂಘಟನೆಯನ್ನು ಟೀಕಿಸಿ, ಭಾರತ ದೇಶಕ್ಕಾಗಿ ಹೋರಾಟ ಮಾಡಿರುವ ಮಹಾನ್ ವ್ಯಕ್ತಿಗಳ ಬಗ್ಗೆ ಮತ್ತು ದೇಶದ ಅಭಿವೃದ್ಧಿಗಾಗಿ  ಕೆಲಸ ಮಾಡಿರುವ ಮಹಾನ್ ವ್ಯಕ್ತಿಗಳ ಬಗ್ಗೆ  79 ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಲ್ಲಿ ಜ್ಞಾಪಿಸಿಕೊಳ್ಳಬೇಕು.

ಇದನ್ನು ಬಿಟ್ಟು  ಆರ್ ಎಸ್ ಎಸ್ ಸಂಘಟನೆ ಬಗ್ಗೆ ಹಾಡಿ ಹೋಗಲಿರುವುದು  ಎಲ್ಲೋ ಒಂದು ಕಡೆ ನರೇಂದ್ರ ಮೋದಿಜಿಯವರು  ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕಾರವನ್ನು ತ್ಯಜಿಸಬೇಕೆಂಬ ಹತಾಶಯದಿಂದ  ಮತ್ತು ಜಿಗುಪ್ಸೆಯಿಂದ  ಆರ್ ಎಸ್ ಎಸ್ ಸಂಘಟನೆ ಬಗ್ಗೆ ಹೊಗಳಿದ್ದಾರೆ, ಎಂದು ದೇಶದ ಜನರ ಮುಂದೆ  ತಮ್ಮ ಮನೋವ್ಯತೆಯನ್ನು ಹೇಳಿಕೊಂಡಿದ್ದಾರೆ ಎಂದು ಅರ್ಥವಾಗುತ್ತಿದೆ, ಆದ್ದರಿಂದ ದೇಶದ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯನ್ನು ದುರುಪಯೋಗ ಮಾಡಿಕೊಂಡಿರುವುದರಿಂದ ದೇಶದ ಜನರಲ್ಲಿ  ಕ್ಷಮೆಯಾಚಿಸಬೇಕೆಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಒತ್ತಾಯ ಮಾಡುತ್ತಿದ್ದೇವೆ.

ಲೇಖಕರು:  ಜಗನ್ನಾಥ್ ಲಾಯಿಲ, ಜಿಲ್ಲಾ ಮಾಧ್ಯಮ ವಕ್ತಾರರು, ಕೆಪಿಸಿಸಿ  ಪರಿಶಿಷ್ಟ ಜಾತಿ ವಿಭಾಗ ಮಾಧ್ಯಮ, ದ.ಕ. ಜಿಲ್ಲೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ