ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರೇ?:  ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ - Mahanayaka
10:38 PM Tuesday 18 - November 2025

ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರೇ?:  ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ

cm bommai
28/02/2023

ಹುಬ್ಬಳ್ಳಿ: ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ  ಅಮಿತ್ ಶಾ ಅವರು  ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು,   ಕಾಂಗ್ರೆಸ್ ಎಷ್ಟು ಹತಾಶರಾಗಿದ್ದಾರೆ ಎಂದು ಈ ಮಾತು  ತಿಳಿಸುತ್ತದೆ. ಮೋದಿಯವರ ಭೇಟಿ ಸಂದರ್ಭದಲ್ಲಿ ಅವರಿಗೆ ದೊರೆತ ಜನಬೆಂಬಲ  ಕಂಡು ಆತಂಕಗೊಂಡು ಈ ಮಾತುಗಳನ್ನಾಡುತ್ತಾರೆ.  ಒಬ್ಬ ಅನುಭವಿ ಮಾಜಿ ಮುಖ್ಯಮಂತ್ರಿಗಳು ಈ ರೀತಿ  ಮಾತನಾಡುವುದು ಎಷ್ಟು ಸರಿ ಎನ್ನುವುದನ್ನು ಜನರಿಗೆ ಬಿಡುತ್ತೇವೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ನಿವೃತ್ತರಾಗುವ ವಯಸ್ಸಲ್ಲ:

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು, ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ತಿಳಿದಿಲ್ಲ. ಅವರದ್ದು ನಿವೃತ್ತಿಯಾಗುವ ವಯಸ್ಸಲ್ಲ. ಬಹಳ ಸೇವೆಯನ್ನು ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರೀತಿಯದ್ದೂ ನಡೆಯುತ್ತದೆ. ಪ್ರತಿ ಚುನಾವಣೆಗೂ ಜನರ ಪ್ರಬುದ್ಧತೆ   ಹೆಚ್ಚಾಗಿದೆ. ನಾವು ಮಾತನಾಡುವಾಗ ಅದರ ಹಿಂದಿನ ಚಿಂತನೆ , ಕಲ್ಪನೆ ಜನರಿಗೆ ತಿಳಿಯುತ್ತದೆ ಎಂದರು.

ಮಾರ್ಚ್ ಒಂದರಿಂದ ರಥಯಾತ್ರೆ:

ಮಾರ್ಚ್ ಒಂದರಿಂದ ನಾಲ್ಕರವರೆಗೆ ರಥಯಾತ್ರೆ ಪ್ರಾರಂಭವಾಗಳಿದ್ದು,  ಎಲ್ಲಾ ಮತ ಕ್ಷೇತ್ರಗಳಿಗೆ ಭೇಟಿ ನೀಡಿ ದಾವಣಗೆರೆಯಲ್ಲಿ  ಬೃಹತ್ ಸಮಾವೇಶವಾಗಲಿದೆ. ಈ  ರಥಯಾತ್ರೆ  ಸಂದರ್ಭದಲ್ಲಿ ಹಲವಾರು ಜನ ಭಾಗವಹಿಸಲಿದ್ದಾರೆ ಎಂದರು.

ಪ್ರಧಾನಮಂತ್ರಿಗಳು, ಗೃಹ ಸಚಿವರು, ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಹಾಗೂ ಧರ್ಮೇಂದ್ರ ಪ್ರಧಾನ್ ಅವರೂ  ರಾಜ್ಯಕ್ಕೆ ಬಂದು ಹೋಗಿದ್ದು, ದೊಡ್ಡ ಪ್ರಮಾಣದಲ್ಲಿ ಪ್ರಚಾರವಾಗುತ್ತದೆ ಹಾಗೂ ಎಲ್ಲಾ ಪ್ರಮುಖ ನಾಯಕರೂ ಬರುತ್ತಾರೆ ಎಂದರು

ಚುನಾವಣಾ ಪಟ್ಟಿ:

ಚುನಾವಣೆಗೆ ಸ್ಪರ್ಧಿಸುವರ ಪಟ್ಟಿ  ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ  ಎಂದರು.

ಗೋ ಬ್ಯಾಕ್ ಮಾಮೂಲಾಗಿದೆ:

ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ಅಭಿಯಾನ ಪ್ರಾರಂಭಿಸಿರುವ ಬಗ್ಗೆ ಉತ್ತರಿಸಿ, ಗೋ ಬ್ಯಾಕ್ ಎನ್ನುವುದು ಬಹಳ ಮಾಮೂಲಿಯಾಗಿದೆ. ಕಾರ್ಯಕ್ರಮ ಪೂರ್ಣ ಮಾಡುತ್ತೇವೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ