ಲೆಬನಾನ್ ಸುತ್ತ ಇಸ್ರೇಲ್ ದಾಳಿ: 600 ರ ಗಡಿ ದಾಟಿದ ಮೃತರ ಸಂಖ್ಯೆ - Mahanayaka
3:37 AM Wednesday 17 - September 2025

ಲೆಬನಾನ್ ಸುತ್ತ ಇಸ್ರೇಲ್ ದಾಳಿ: 600 ರ ಗಡಿ ದಾಟಿದ ಮೃತರ ಸಂಖ್ಯೆ

26/09/2024

ಪೂರ್ವ ಲೆಬನಾನ್​ನ ಬಾಲ್ಬೆಕ್, ಹರ್ಮೆಲ್ ಮತ್ತು ಪಶ್ಚಿಮ ಬೆಕಾ ಪ್ರದೇಶಗಳ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಬುಧವಾರ ಸುಮಾರು 70 ದಾಳಿಗಳನ್ನು ನಡೆಸಿದ್ದು, ಇದರಲ್ಲಿ ಸುಮಾರು 72 ಜನ ಸಾವಿಗೀಡಾಗಿದ್ದು, ಈವರೆಗೆ ಮೃತರ ಒಟ್ಟು ಸಂಖ್ಯೆ 620ನ್ನೂ ದಾಟಿದೆ.


Provided by

ಲೆಬನಾನ್‍ನಲ್ಲಿ ಆತಂಕದ ವಾತಾವರಣ ನಿರ್ಮಾಣದ ಹಿನ್ನೆಲೆಯಲ್ಲಿ ಲೆಬನಾನ್‍ಗೆ ಪ್ರಯಾಣಿಸದಂತೆ ಬೈರುತ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.

ಲೆಬನಾನ್ ನಾದ್ಯಂತ ಇಸ್ರೇಲ್ ನಡೆಸಿದ ಬೃಹತ್ ಬಾಂಬ್ ದಾಳಿಗೆ ಬೆದರಿ ಸುಮಾರು 5 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ಸಿರಿಯಾ ಗಡಿಗೆ ಹೊಂದಿಕೊಂಡಿರುವ ಲೆಬನಾನ್‌ನ ಪೂರ್ವ ಬೆಕ್ಕಾ ಕಣಿವೆಯ ಪುರಾತನ ನಗರಿ ಬಾಲ್‌ಬೆಕ್‌ನಲ್ಲಿ ಬುಧವಾರ ರಾತ್ರಿ ದಾಳಿ ನಡೆದಿದೆ ಎಂದು ‘ದಿ ನ್ಯಾಷನಲ್ ನ್ಯೂಸ್ ಏಜೆನ್ಸಿ’ ವರದಿ ಮಾಡಿದೆ.

ಕಟ್ಟಡಗಳ ಅವಶೇಷಗಳಡಿಯಿಂದ 23 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಯುನೈನ್ ಗ್ರಾಮದ ಮೇಯರ್‌ ಅಲಿ ಕಸ್ಸಸ್ ರನ್ನು ಉಲ್ಲೇಖಿಸಿ ವಾಹಿನಿ ವರದಿ ಮಾಡಿದೆ. ನಾಲ್ವರು ಸಿರಿಯನ್ನರು ಹಾಗೂ ಲೆಬನಾನ್ ನಾಗರಿಕರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಲೆಬನಾನ್‍ನಲ್ಲಿ ನೆಲೆಸಿರುವ ಭಾರತೀಯರಿಗೆ ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಸಲಹೆ ನೀಡಲಾಗಿದೆ. ಕಾರಣಾಂತರಗಳಿಂದ ಲೆಬನಾನ್‍ನಲ್ಲೇ ಉಳಿದ ಜನ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.

ಬೈರುತ್‍ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಸಂಪರ್ಕಕ್ಕಾಗಿ ಇಮೇಲ್ ಐಡಿ cons.beirut@mea.gov.in ಅಥವಾ ತುರ್ತು ದೂರವಾಣಿ ಸಂಖ್ಯೆ +96176860128ಗೆ ಕರೆ ಮಾಡುವಂತೆ ತಿಳಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ