ಇಸ್ರೇಲ್ ಪ್ರಧಾನಿ ಆರೋಗ್ಯದಲ್ಲಿ ಚೇತರಿಕೆ: ಯಾವ ಭಯ ಬೇಡ ಅಂದ್ರು ವೈದ್ಯರು - Mahanayaka

ಇಸ್ರೇಲ್ ಪ್ರಧಾನಿ ಆರೋಗ್ಯದಲ್ಲಿ ಚೇತರಿಕೆ: ಯಾವ ಭಯ ಬೇಡ ಅಂದ್ರು ವೈದ್ಯರು

18/07/2023


Provided by

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೊನ್ನೆ ಇಸ್ರೇಲಿ ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಅವರ ಕಚೇರಿ ತಿಳಿಸಿದೆ. 73ರ ಹರೆಯದ ನೆತನ್ಯಾಹು ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಟೆಲ್ ಹ್ಯಾಶೋಮರ್ ಕರಾವಳಿ ಸಿಸೇರಿಯಾಕ್ಕೆ ಹತ್ತಿರದಲ್ಲಿ
ಬೆಂಜಮಿನ್ ನೆತನ್ಯಾಹು ಅವರು ಖಾಸಗಿ ನಿವಾಸವನ್ನು ಹೊಂದಿದ್ದಾರೆ. ಅವರು ಅಸ್ವಸ್ಥರಾಗಿದ್ದಾರೆಂದು ವರದಿ ಮಾಡಿದಾಗ ಅವರು ಅಲ್ಲಿದ್ದರು ಎಂದು ಇಸ್ರೇಲಿ ಮಾಧ್ಯಮಗಳು ತಿಳಿಸಿವೆ. ಅಕ್ಟೋಬರ್ ಆರಂಭದಲ್ಲಿ ಯೋಮ್ ಕಿಪ್ಪೂರ್‌ನ ಯಹೂದಿ ಉಪವಾಸದ ಸಮಯದಲ್ಲಿ ನೆತನ್ಯಾಹು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಸ್ರೇಲ್ ನಲ್ಲಿ ಬಿಸಿಗಾಳಿ ಬೀಸುತ್ತಿರುವುದರಿಂದ್ದ ಆರೋಗ್ಯದಲ್ಲಿ ಏರುಪೇರುಂಟಾಗಿತ್ತು ಎನ್ನಲಾಗಿದೆ.
ನೆತನ್ಯಾಹು ಕಚೇರಿಯ ಹೇಳಿಕೆ ಪ್ರಕಾರ, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು ಸಮಯಕ್ಕೆ ತಕ್ಕಂತೆ ಅವರು ವೈದ್ಯಕೀಯ ಪರೀಕ್ಷೆಗೊಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ