ಜಾತಿ ವರದಿಯನ್ನು ಪಕ್ಷದ ಸಚಿವರೇ ವಿರೋಧಿಸುವುದು ಸರಿಯಲ್ಲ: ಸ್ವಪಕ್ಷೀಯರಿಗೆ ರಮಾನಾಥ ರೈ ಬುದ್ಧಿಮಾತು - Mahanayaka
3:11 PM Wednesday 21 - January 2026

ಜಾತಿ ವರದಿಯನ್ನು ಪಕ್ಷದ ಸಚಿವರೇ ವಿರೋಧಿಸುವುದು ಸರಿಯಲ್ಲ: ಸ್ವಪಕ್ಷೀಯರಿಗೆ ರಮಾನಾಥ ರೈ ಬುದ್ಧಿಮಾತು

ramanath rai
18/04/2025

ಮಂಗಳೂರು: ಜಾತಿ ವರದಿಯನ್ನು ನಮ್ಮ ಪಕ್ಷದ ಸಚಿವರೇ ವಿರೋಧಿಸುವುದು ಸರಿಯಲ್ಲ, ಜಾತಿ ವರದಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಇದೆ ಅಂತ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಬಿ.ರಮಾನಾಥ ರೈ ಸ್ವಪಕ್ಷೀಯ ಸಚಿವರಿಗೆ ಬುದ್ಧಿಮಾತು ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು,  ಪಕ್ಷದ ನಿರ್ಧಾರಕ್ಕಿಂತ ಯಾವುದೇ ವ್ಯಕ್ತಿ ದೊಡ್ಡವರಲ್ಲ, ಪ್ರಣಾಳಿಕೆಯ ಭರವಸೆಯಂತೆ ವರದಿ ಜಾರಿಗೊಳಿಸಲಾಗ್ತಿದೆ ಅಂತ ತಿಳಿಸಿದರು.

ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದೇ ಪಕ್ಷದ ನಿಲುವು. ಹಾಗಾಗಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಜಾತಿ ಜನಗಣತಿ ಜಾರಿಗೊಳಿಸಲಾಗ್ತಿದೆ. ದತ್ತಾಂಶಗಳಲ್ಲಿ ನ್ಯೂನ್ಯತೆ ಇದ್ದಲ್ಲಿ ಅದನ್ನ ಸರಿಪಡಿಸಬಹುದು. ಆದ್ರೆ ವರದಿ ಜಾರಿ ಬೇಡ ಎನ್ನುವುದು ಸೂಕ್ತವಲ್ಲ ಎಂದು ಅವರು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ