ಕ್ರೈಸ್ತರಲ್ಲೂ ಬಡವರಿದ್ದಾರೆ, ಅವರಿಗೂ ಅಭಿವೃದ್ಧಿ ನಿಗಮ ಮಾಡಿ | ಐವಾನ್ ಡಿಸೋಜಾ ಒತ್ತಾಯ - Mahanayaka
10:33 AM Tuesday 28 - October 2025

ಕ್ರೈಸ್ತರಲ್ಲೂ ಬಡವರಿದ್ದಾರೆ, ಅವರಿಗೂ ಅಭಿವೃದ್ಧಿ ನಿಗಮ ಮಾಡಿ | ಐವಾನ್ ಡಿಸೋಜಾ ಒತ್ತಾಯ

18/11/2020

ಮಂಗಳೂರು: ರಾಜ್ಯದಲ್ಲಿ ಕ್ರೈಸ್ತರಲ್ಲಿಯೂ ಸಾಕಷ್ಟು ಬಡವರಿದ್ದಾರೆ, ಮರಾಠ ಅಭಿವೃದ್ಧಿ ಪ್ರಾಧಿಕಾರ ಮತ್ತು ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದಂತೆ  ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮವನ್ನೂ ಮಾಡಬೇಕು ಎಂದು ಮಾಜಿ ಎಂಎಲ್‌ ಸಿ ಮತ್ತು ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕ್ರೈಸ್ತ ಸಮುದಾಯವು ಮೌನವಾಗಿದೆ ಎಂದರೆ ಅದು ವೀಕ್ನೆಸ್ ಎಂದು ಸರ್ಕಾರ ಅರ್ಥ ಮಾಡಿಕೊಳ್ಳಬಾರದು, ನಮ್ಮ ಮನವಿಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ, ಜನರು ಬೀದಿಗೆ ಇಳಿದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಐವಾನ್ ಡಿಸೋಜ ಎಚ್ಚರಿಸಿದರು.

2008ರಲ್ಲಿ ಚರ್ಚ್ ದಾಳಿಯಾದಾಗಲೂ ನಾವು ತಾಳ್ಮೆ ವಹಿಸಿದ್ದೇವೆ. ಬಿಷನ್ ಸನ್ಮಾನ ಸ್ವೀಕರಿಸಿದ್ದ ಯಡಿಯೂರಪ್ಪ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುಮೋದನೆ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಅದನ್ನು ರದ್ದು ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ