ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್  ಹೃದಯಾಘಾತದಿಂದ ನಿಧನ - Mahanayaka

ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್  ಹೃದಯಾಘಾತದಿಂದ ನಿಧನ

ivana trump
15/07/2022

ವಾಷಿಂಗ್ಟನ್:  ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್  ಗುರುವಾರ ನಿಧನರಾಗಿದ್ದು,    ಈ ಬಗ್ಗೆ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದಾರೆ.

ಗುರುವಾರ ಮಧ್ಯಾಹ್ನ ಮ್ಯಾನ್ ಹಟನ್ ಟೌನ್ ಹೌಸ್ ನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮೊದಲ ಪತ್ನಿಯ ನಿಧನದ ಸುದ್ದಿಯನ್ನು ಟ್ರಂಪ್ ಹಂಚಿಕೊಂಡರು.

“ನಿನ್ನ ನೆನಪನ್ನು ನನ್ನ ಹೃದಯದಲ್ಲಿ ಜೀವಂತವಾಗಿರಿಸಿಕೊಳ್ಳುತ್ತೇನೆ. ಸ್ಫೂರ್ತಿದಾಯಕ ಜೀವನ ಸಾಗಿಸಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ವಿದಾಯ ಹೇಳಿದ್ದಾರೆ.

ಇನ್ನೂ ತಾಯಿಯ ಅಗಲಿಕೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪುತ್ರಿ ಇವಾಂಕ ಟ್ರಂಪ್,   ತಾಯಿಯ ಅಗಲಿಕೆಯಿಂದ ನನ್ನ ಹೃದಯ ತೀವ್ರವಾಗಿ ನೊಂದಿದೆ.  ಮಾಮ್ ಅದ್ಭುತ, ಆಕರ್ಷಕ, ಭಾವನಾತ್ಮಕವಾಗಿದ್ದರು. ಅವರ ಸ್ಮರಣೆ ನಮ್ಮ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತದೆ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ