ಸತ್ಯ ಬಯಲು: ಸಾವಿಗೂ ಮುನ್ನ ವಿದ್ಯಾರ್ಥಿಯನ್ನು ರ‍್ಯಾಗಿಂಗ್ ಮಾಡಲಾಗಿತ್ತು; ಜಾಧವ್ ಪುರ್ ವಿಶ್ವವಿದ್ಯಾಲಯದ ಸಮಿತಿ ದೃಢ - Mahanayaka
7:12 AM Saturday 20 - December 2025

ಸತ್ಯ ಬಯಲು: ಸಾವಿಗೂ ಮುನ್ನ ವಿದ್ಯಾರ್ಥಿಯನ್ನು ರ‍್ಯಾಗಿಂಗ್ ಮಾಡಲಾಗಿತ್ತು; ಜಾಧವ್ ಪುರ್ ವಿಶ್ವವಿದ್ಯಾಲಯದ ಸಮಿತಿ ದೃಢ

05/09/2023

ತನ್ನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ ನಡೆಸಲು ಜಾಧವ್ ಪುರ್ ವಿಶ್ವವಿದ್ಯಾಲಯ ರಚಿಸಿದ ಸಮಿತಿಯು ವಿದ್ಯಾರ್ಥಿ ಸಾವಿಗೂ ಮುನ್ನ ತೀವ್ರ ರ‍್ಯಾಗಿಂಗ್ ಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದೆ. ಹೀಗಾಗಿ ಅಪರಾಧದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದೆ.

ಘಟನೆ ನಡೆದ 25 ದಿನಗಳ ನಂತರ ಮಂಗಳವಾರ ತನ್ನ ವರದಿಯನ್ನು ಸಲ್ಲಿಸಿದ ಸಮಿತಿಯು ನಾಲ್ವರು ವಿದ್ಯಾರ್ಥಿಗಳನ್ನು ಹೊರಹಾಕಲು ಮತ್ತು ಇತರರನ್ನು ಒಂದು ವರ್ಷದವರೆಗೆ ಅಮಾನತುಗೊಳಿಸಲು ಸೂಚಿಸಿದೆ ಎಂದು ಹಂಗಾಮಿ ಉಪಕುಲಪತಿ ಬುದ್ಧದೇಬ್ ಸಾವು ಪಿಟಿಐಗೆ ತಿಳಿಸಿದ್ದಾರೆ.

ಆಗಸ್ಟ್ 9 ರ ರಾತ್ರಿ 17 ವರ್ಷದ ವಿದ್ಯಾರ್ಥಿಯನ್ನು ಹಿರಿಯರು ತೀವ್ರ ರ‍್ಯಾಗಿಂಗ್ ಗೆ ಒಳಪಡಿಸಿದ್ದಾರೆ ಎಂದು ವರದಿ ದೃಢಪಡಿಸಿದೆ ಎಂದು ಅವರು ಹೇಳಿದ್ದಾರೆ.
ನಾಡಿಯಾ ಜಿಲ್ಲೆಯವನಾದ ಅಪ್ರಾಪ್ತ ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಮಾರಣಾಂತಿಕ ಗಾಯಗಳಿಂದ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಇತ್ತೀಚಿನ ಸುದ್ದಿ