ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಭೀಕರವಾಗಿ ಕೊಂದ ಕಾಡು ಪ್ರಾಣಿ! - Mahanayaka
10:46 PM Thursday 16 - October 2025

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಭೀಕರವಾಗಿ ಕೊಂದ ಕಾಡು ಪ್ರಾಣಿ!

mandya crime news
31/07/2021

ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡು ಪ್ರಾಣಿಯೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದಲ್ಲಿ ನಡೆದಿದ್ದು, ದಾಳಿ ನಡೆಸಿರುವ ಪ್ರಾಣಿ ಯಾವುದು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.


Provided by

65 ವರ್ಷ ವಯಸ್ಸಿನ ರಾಮೇಗೌಡ ಮೃತಪಟ್ಟವರಾಗಿದ್ದು, ಹೊಟ್ಟೆಯನ್ನು ಬಗೆದು ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ನೆಲಮನೆ ನಿವಾಸಿಯಾಗಿರುವ ರಾಮೇಗೌಡರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡು ಪ್ರಾಣಿಯೊಂದು ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನೂ ರಾಮೇಗೌಡರನ್ನು ಬಲಿ ಪಡೆದಿರುವ ಪ್ರಾಣಿ ಯಾವುದು ಎಂದು ತಿಳಿದು ಬಂದಿಲ್ಲ. ಚಿರತೆ ಅಥವಾ ಕಾಡು ಹಂದಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕೋಣೆಗೆ ನುಗ್ಗಿದ ಪ್ರಿಯಕರ, ಪ್ರೇಯಸಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ!

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಿಡಿ ಭೀತಿ!

ಎರಡು ಮದುವೆಯಾದ ತಂದೆ, ತನ್ನ ಮಗನನ್ನೇ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ!

ನಡು ರಸ್ತೆಯಲ್ಲಿಯೇ ತಂಗಿಗೆ ಚಾಕುವಿನಿಂದ ಇರಿದು ಕೊಂದ ಅಣ್ಣಂದಿರು!

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾನಿಂದ ನಟಿ ಶೆರ್ಲಿನ್ ಚೋಪ್ರಾಗೆ ಲೈಂಗಿಕ ಕಿರುಕುಳ!

ಇತ್ತೀಚಿನ ಸುದ್ದಿ