ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: ಹೊರಬಿದ್ದ ಬಿಜೆಪಿಯ ಮೊದಲ ಗೊಂದಲ..! - Mahanayaka
10:45 AM Saturday 23 - August 2025

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: ಹೊರಬಿದ್ದ ಬಿಜೆಪಿಯ ಮೊದಲ ಗೊಂದಲ..!

26/08/2024


Provided by

ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಗೊಂದಲ ಹೊರಬಿದ್ದಿದೆ. ಮೊದಲ ಹಂತದಲ್ಲಿ 44 ಅಭ್ಯರ್ಥಿಗಳನ್ನು ಘೋಷಿಸಿದ ಕೆಲವೇ ಸಮಯದಲ್ಲಿ ವಾಪಸ್‌ ತೆಗೆದುಕೊಂಡಿದೆ. ಬಿಜೆಪಿ ಮೂಲಗಳ ಪ್ರಕಾರ ಹೊಸ ಪಟ್ಟಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಜಮ್ಮು ಕಾಶ್ಮೀರದದಲ್ಲಿ ನಡೆಯುವ ಮೂರು ಹಂತಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಸೆ.18 ರಂದು ನಡೆಯುವ ಮೊದಲ ಹಂತದಲ್ಲಿ 15 ಅಭ್ಯರ್ಥಿಗಳು, ಸೆ.25 ರಂದು ನಡೆಯುವ ಎರಡನೇ ಹಂತದಲ್ಲಿ 10 ಅಭ್ಯರ್ಥಿಗಳು ಹಾಗೂ ಅ.1 ರಂದು ನಡೆಯುವ ಮೂರನೇ ಹಂತದಲ್ಲಿ 19 ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು.

ರದ್ದಾದ ಪಟ್ಟಿಯಲ್ಲಿ 14 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಇದರಲ್ಲಿ ಮುಸ್ಲಿಂ ಬಾಹುಳ್ಯದ 8 ಕ್ಷೇತ್ರಗಳು ಸೇರಿದ್ದವು. ಜೊತೆಯಲ್ಲಿ ಇಬ್ಬರು ಕಾಶ್ಮೀರಿ ಪಂಡಿತರಿಗೂ ಘೋಷಿಸಲಾಗಿತ್ತು.

44 ಅಭ್ಯರ್ಥಿಗಳಲ್ಲಿ ಕೇವಲ ಒಬ್ಬರು ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಲಾಗಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ನಾಲ್ವರು ದಲಿತರಿಗೆ ಟಿಕೆಟ್ ಅಂತಿಮಗೊಳಿಸಲಾಗಿತ್ತು. ಹಿಂದೆಗೆದುಕೊಂಡ ಪಟ್ಟಿಯಲ್ಲಿ ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಹಾಗೂ ಮಾಜಿ ಡಿಸಿಎಂಗಳಾದ ನಿರ್ಮಲ್ ಸಿಂಗ್ ಹಾಗೂ ಕವೀಂದ್ರ ಗುಪ್ತ ರಿಗೆ ಟಿಕೆಟ್ ನೀಡಿರಲಿಲ್ಲ.

ಸೆ. 18 ರಿಂದ ಅ.1ರವರೆಗೆ ನಡೆಯುವ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 4 ರಂದು ಫಲಿತಾಂಶ ಘೋಷಿಸಲಾಗುತ್ತದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ