ಜ.22ರಂದು ಬೆಂಗಳೂರು ಬಂದ್ ಗೆ ಕರೆ ನೀಡಿದ ಮುಸ್ಲಿಮ್ ಸಂಘಟನೆಗಳು - Mahanayaka

ಜ.22ರಂದು ಬೆಂಗಳೂರು ಬಂದ್ ಗೆ ಕರೆ ನೀಡಿದ ಮುಸ್ಲಿಮ್ ಸಂಘಟನೆಗಳು

19/01/2021


Provided by

ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ಮುಸ್ಲಿಮ್ ಸಂಘಟನೆ ಜ.22ರಂದು ಬೆಂಗಳೂರು ಬಂದ್ ಗೆ ಕರೆ ನೀಡಿದ್ದು,  ಈ ಬಂದ್ ಶಾಂತಿಯುತವಾಗಿ ನಡೆಯಲಿದೆ ಎಂದು  ಕರ್ನಾಟಕ ಮುಸ್ಲಿಮ್ ಸಂಘಟನೆಗಳು ಒಕ್ಕೂಟಗಳ ಸಮನ್ವಯಕಾರ ಮಸೂದ್ ಅಬ್ದುಲ್ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಡಿಜೆಹಳ್ಳಿ, ಕೆಜೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು, ಲವ್ ಜಿಹಾದ್ ಹಾಗೂ ಕೃಷಿ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು,  ಡಿಕೆ,ಕೆಜೆಹಳ್ಳಿ ಗಲಭೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಸ್ ಡಿಪಿಐ ಮುಖಂಡ ಮುಜಾಮ್ಮಿಲ್ ಪಾಷಾ ಸೇರಿದಂತೆ 421 ಜನರನ್ನು  ಬಿಡುಗಡೆ ಮಾಡಬೇಕು ಹಾಗೂ ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳನ್ನು ಇಡಲಾಗಿದೆ.

ಬಂದ್ ಶಾಂತಿಯುತವಾಗಿ ನಡೆಯಲಿದ್ದು, ಯಾವುದೇ ಪ್ರತಿಭಟನೆಗಳು ಇರುವುದಿಲ್ಲ. ಗುಂಪು ಗೂಡುವಂತಹ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಸ್ವಯಂ ಪ್ರೇರಿತವಾಗಿ ಬೆಂಗಳೂರಿನಲ್ಲಿ ಇರುವ ಮುಸ್ಲಿಮರು ಶುಕ್ರವಾರ ಎಲ್ಲ ಉದ್ಯಮಗಳನ್ನು ಬಂದ್ ಮಾಡಿ ಮನೆಯಲ್ಲಿರಬೇಕು. ಬೆಳಗ್ಗಿನಿಂದ ಸಂಜೆ 5 ಗಂಟೆಯವರೆಗೆ ಎಲ್ಲ ಮುಸ್ಲಿಮರ ಅಂಗಡಿಗಳು ಬಂದ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ