ಜನತೆಗೆ ಭರ್ಜರಿ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿ! - Mahanayaka
11:09 PM Saturday 31 - January 2026

ಜನತೆಗೆ ಭರ್ಜರಿ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿ!

15/02/2021

ಕೋಲ್ಕತ್ತಾ: ಕೇವಲ 5 ರೂಪಾಯಿಗೆ ಊಟ ನೀಡುವ “ಮಾ” ಯೋಜನೆಗೆ  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚಾಲನೆ ನೀಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಇತರ ಪಕ್ಷಗಳನ್ನು ಹಿಮ್ಮೆಟ್ಟಿಸಲು ದೀದಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಒಂದು ತಟ್ಟೆ ಅನ್ನ, ದಾಲ್, ತರಕಾರಿ ಹಾಗೂ ಮೊಟ್ಟೆ ಪಲ್ಯವನ್ನು ಐದು ರೂಪಾಯಿಗೆ ನೀಡಲಾಗುತ್ತಿದೆ. ಒಂದು ಪ್ಲೇಟ್ ಗೆ 15 ತಗುಲಲಿದ್ದು, ರಾಜ್ಯ ಸರ್ಕಾರವು ಉಳಿದ ವೆಚ್ಚವನ್ನು ಭರಿಸಲಿದೆ.

ಬಡವರಿಗಾಗಿ ಈ ಹೊಸ ಆಹಾರ ಯೋಜನೆಯನ್ನು ತಂದಿರುವುದಾಗಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಆಹಾರ ತಯಾರಿಕೆ ಕಾರ್ಯವನ್ನು ಸ್ವಸಹಾಯ ಗುಂಪುಗಳು ನಿರ್ವಹಿಸಲಿದ್ದು, ಪ್ರತಿದಿನ ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಕಾರ್ಯನಿರ್ವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ