ಅರಕಲಗೂಡಿನಲ್ಲಿ ಪಕ್ಷ ನಿಷ್ಠೆಗೆ ಹೆಸರಾಗಿರುವ ಜೆಡಿಎಸ್ ಪಕ್ಷ ಸಂಘಟನಾ ಚತುರ ರವಿಕಿರಣ್ - Mahanayaka
5:11 AM Wednesday 3 - September 2025

ಅರಕಲಗೂಡಿನಲ್ಲಿ ಪಕ್ಷ ನಿಷ್ಠೆಗೆ ಹೆಸರಾಗಿರುವ ಜೆಡಿಎಸ್ ಪಕ್ಷ ಸಂಘಟನಾ ಚತುರ ರವಿಕಿರಣ್

ravi keran
24/03/2023


Provided by

ಅರಕಲಗೂಡು: ಚುನಾವಣೆ ಹೊತ್ತಿನಲ್ಲೇ ಅರಕಲಗೂಡು ಜೆಡಿಎಸ್ ನ ನಿಷ್ಠಾವಂತ ಮುಖಂಡ ರವಿಕಿರಣ್  ಅವರ ಪಕ್ಷ ನಿಷ್ಠೆ ಹಾಗೂ ಸಾಮಾಜಿಕ ಕಾರ್ಯಗಳುಪಕ್ಷದೊಳಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ಅರಕಲಗೂಡು ತಾಲೂಕಿನಲ್ಲಿ ಸೂರಜ್ ರೇವಣ್ಣ ಸಾರಥ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿರುವ ರವಿಕಿರಣ್ , ಯುವ ಕಾರ್ಯಕರ್ತರಿಗೆ ವ್ಯಕ್ತಿಗಿಂತಲೂ ಪಕ್ಷ ಮುಖ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುವಂತೆ ಸದಾ ಸಲಹೆ ನೀಡುತ್ತಾರೆ ಅನ್ನೋದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಪಕ್ಷಕ್ಕೆ ಯಾರೇ ಬಂದರೂ ಪ್ರೀತಿಯಿಂದ ಸ್ವಾಗತಕೋರುವ ಮೂಲಕ ಮಾದರಿಯಾಗಿರುವ ಕಿರಣ್  ಜೆಡಿಎಸ್ ನಲ್ಲಿ ಕಟ್ಟಾಳಾಗಿ ದುಡಿಯುತ್ತಿದ್ದಾರೆ. ಹುಟ್ಟಿನಿಂದಲೇ ಹೋರಾಟಗಾರ ಅನ್ನೋವಂತಹ ಸಂಘಟನಾ ಚತುರತೆ ಹೊಂದಿರುವ ರವಿಕಿರಣ್ ಕುಮಾರ್ , ಅರಕಲಗೂಡಿನ ಯುವ ಕಾರ್ಯಕರ್ತರ ಅಚ್ಚುಮೆಚ್ಚಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ನ್ನು ಅಧಿಕಾರಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಅರಕಲಗೂಡಿನಲ್ಲಿ ನಿರಂತರವಾಗಿ ಓಡಾಡಿ ಜನಸಾಮಾನ್ಯರ ಜೊತೆಗೆ ಬೆರೆತು ಜೆಡಿಎಸ್ ನ ಬೆಳವಣಿಗೆಗೆ ದುಡಿಯುತ್ತಿರುವ ರವಿಕಿರಣ್ , ಯುವ ಸಮುದಾಯಕ್ಕೆ ಕೂಡ ಸ್ಪೂರ್ತಿಯಾಗಿದ್ದಾರೆ. ತಾಲ್ಲೂಕಿನಲ್ಲಿ ಯುವ ಸಂಘಟನೆಗಳು ನಡೆಸುವ ಯಾವುದೇ ಕಾರ್ಯಕ್ರಮ ಹಾಗೂ ಟೂರ್ನಮೆಂಟ್ ಗಳಿಗೆ ಇವರ ಸಹಕಾರ ಇದ್ದೇ ಇರುತ್ತದೆ. ಇವರ ಸಹಕಾರದಿಂದ ಸಾಕಷ್ಟು ಯುವಕರು, ಸಂಘಟನೆಗಳು ಸ್ಫೂರ್ತಿಗೊಂಡಿದ್ದಾರೆ.

ಸೂರಜ್ ರೇವಣ್ಣ ಹಾಗೂ ಜೆಡಿಎಸ್ ಅನ್ನೋ ಪಥದಲ್ಲಿ ಜನಸೇವೆ ಮಾಡುತ್ತಿರುವ ರವಿಕಿರಣ್  ಅವರು ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಮಾಡಲು ನಿರಂತರವಾಗಿ ದುಡಿಯುತ್ತಿದ್ದಾರೆ. ಅರಕಲಗೂಡು ತಾಲೂಕಿನಲ್ಲಿ ಜೆಡಿಎಸ್ ಯುವಕರ ಮನಸ್ಸು ಗೆದ್ದಿರುವ ಇವರು ಯುವಕರಲ್ಲಿ ಪಕ್ಷ ಪ್ರೇಮವನ್ನು ಬೆಳೆಸುವ ಮೂಲಕ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ ಅನ್ನೋ ಮೆಚ್ಚುಗೆಯ ಮಾತುಗಳು ಅರಕಲಗೂಡಿನಲ್ಲಿ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ