ಭಾರತಕ್ಕೆ ಬಂದ ಅಮೆರಿಕ‌ ಅಧ್ಯಕ್ಷ: ಮೋದಿ ಜತೆ ರಹಸ್ಯ ಮಾತುಕತೆ - Mahanayaka

ಭಾರತಕ್ಕೆ ಬಂದ ಅಮೆರಿಕ‌ ಅಧ್ಯಕ್ಷ: ಮೋದಿ ಜತೆ ರಹಸ್ಯ ಮಾತುಕತೆ

08/09/2023


Provided by

ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತಕ್ಕೆ ಬಂದಿಳಿದರು. ಮೊದಲು ಕೇಂದ್ರ ಸಚಿವ ವಿ ಕೆ ಸಿಂಗ್ ಅವರು ಬೈಡನ್ ಅವರನ್ನು ಸ್ವಾಗತಿಸಿದರು. ಬಳಿಕ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಪ್ರಧಾನಿ ನಿವಾಸದಲ್ಲಿ ನಡೆದ ಉಭಯ ನಾಯಕರ ನಡುವಿನ ಮಾತುಕತೆ ವೇಳೆ ರಷ್ಯಾ-ಉಕ್ರೇನ್ ಸಂಘರ್ಷ, ಜಂಟಿ ನೆರವು, ಪರಮಾಣ ಶಕ್ತಿ, ರಕ್ಷಣೆ ಮತ್ತು ಜೆಟ್‌ ಒಪ್ಪಂದಗಳು ಏರ್ಪಡಲಿವೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಭೇಟಿಯ ನಂತರ ಖಾಸಗಿಯಾಗಿ ಬೈಡನ್ ಗೆ ರಾತ್ರಿ ಭೋಜನದ ವ್ಯವಸ್ಥೆಯನ್ನು ಮೋದಿ ಅವರು ಮಾಡಿದ್ದರು.
ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಜೋ ಬೈಡೆನ್ ಅವರು ಭಾರತಕ್ಕೆ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಬೈಡೆನ್ ದಂಪತಿ ಮೋದಿ ಅವರಿಗೆ ಶ್ವೇತಭವನದಲ್ಲಿ ವಿಶೇಷ ಅತಿಥಿ ಸತ್ಕಾರ ನೀಡಿದ್ದರು.

ಇತ್ತೀಚಿನ ಸುದ್ದಿ