ಜ್ಯುವೆಲ್ಲರಿ ದರೋಡೆ ಮಾಡೋಕೇ ಬಂದ್ರು ಮೂವರು ಮುಸುಕುಧಾರಿಗಳು: ವ್ಯಾಪಾರಿಯ ಪುತ್ರನ ಮೇಲೆ ಗುಂಡಿನ ದಾಳಿ - Mahanayaka
12:19 AM Thursday 21 - August 2025

ಜ್ಯುವೆಲ್ಲರಿ ದರೋಡೆ ಮಾಡೋಕೇ ಬಂದ್ರು ಮೂವರು ಮುಸುಕುಧಾರಿಗಳು: ವ್ಯಾಪಾರಿಯ ಪುತ್ರನ ಮೇಲೆ ಗುಂಡಿನ ದಾಳಿ

12/11/2024


Provided by

ಹರ್ಯಾಣದ ಬವಾಲ್ ಪಟ್ಟಣದ ಕಟ್ಲಾ ಬಜಾರ್ ನಲ್ಲಿ ಮೂವರು ಮುಸುಕುಧಾರಿಗಳು ಆಭರಣ ವ್ಯಾಪಾರಿಯ ಮಗನನ್ನು ಗುಂಡಿಕ್ಕಿ ಗಾಯಗೊಳಿಸಿ ನಗದು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಡಹಗಲೇ ನಡೆದ ದರೋಡೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರ ಪ್ರಕಾರ, ಮೂವರು ಮುಸುಕುಧಾರಿ ದರೋಡೆಕೋರರು ಬೆಳಿಗ್ಗೆ 11.30 ರ ಸುಮಾರಿಗೆ ಬೈಕಲ್ಲಿ ಕೋಮಲ್ ಜ್ಯುವೆಲ್ಲರ್ ಗೆ ಬಂದಿದ್ದಾರೆ.

ದರೋಡೆಕೋರರಲ್ಲಿ ಓರ್ವ ಆಭರಣ ಅಂಗಡಿ ಮಾಲೀಕ ಪ್ರೀತಮ್ ಸಿಂಗ್ ಅವರ ಪುತ್ರ ಹಿತೇಂದ್ರ ಸೋನಿ ಕಡೆಗೆ ಪಿಸ್ತೂಲ್ ತೋರಿಸಿದ್ದಾನೆ. ಆಗ ಅವರು ಪ್ರತಿಭಟಿಸಿದಾಗ, ದುಷ್ಕರ್ಮಿಗಳು ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ.
ನಂತರ ಮೂವರು ಆರೋಪಿಗಳು ಸ್ವಲ್ಪ ನಗದು ಮತ್ತು ಆಭರಣಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಶಿಯೋರನ್ ಮತ್ತು ಬವಾಲ್ ಎಸ್ಎಚ್ಒ ಇನ್ಸ್‌ಪೆಕ್ಟರ್ ಲಜಪತ್ ತಮ್ಮ ತಂಡಗಳೊಂದಿಗೆ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.
ಹಿತೇಂದ್ರ ಬಾವಲ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ