ಜಾರ್ಖಂಡ್ ಚುನಾವಣೆ 2024: ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ; ಮೀಸಲಾತಿ, ಪಡಿತರ ಕೋಟಾ ಹೆಚ್ಚಿಸುವ ಭರವಸೆ - Mahanayaka
12:49 PM Thursday 21 - August 2025

ಜಾರ್ಖಂಡ್ ಚುನಾವಣೆ 2024: ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ; ಮೀಸಲಾತಿ, ಪಡಿತರ ಕೋಟಾ ಹೆಚ್ಚಿಸುವ ಭರವಸೆ

05/11/2024


Provided by

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ವಾರ ಬಾಕಿ ಇರುವಾಗ ಕಾಂಗ್ರೆಸ್, ಜೆಎಂಎಂ, ಆರ್ ಜೆಡಿ, ಎಡಪಕ್ಷಗಳು ಇಂದು ತಮ್ಮ ಜಂಟಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮೀಸಲಾತಿ, ಪಡಿತರ ಮತ್ತು ಉದ್ಯೋಗಗಳ ಮೇಲೆ ದೊಡ್ಡ ಭರವಸೆ ನೀಡಿದೆ. ಜಾರ್ಖಂಡ್ ನಲ್ಲಿ ಜೆಎಂಎಂ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ನೇತೃತ್ವದ ಬಣವು ಬಿಜೆಪಿಯನ್ನು ಎದುರಿಸಲು ಏಳು ಭರವಸೆಗಳನ್ನು ನೀಡಿದೆ.

ಎಸ್ಟಿಗಳಿಗೆ ಶೇ.28, ಎಸ್ಸಿಗಳಿಗೆ ಶೇ.12 ಮತ್ತು ಒಬಿಸಿಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ಹೆಚ್ಚಿಸುವುದಾಗಿ ಇಂಡಿಯಾ ‌ಮೈತ್ರಿಕೂಟ ಭರವಸೆ ನೀಡಿದೆ. ಆಡಳಿತಾರೂಢ ಮೈತ್ರಿಕೂಟವು ಬಡವರಿಗೆ ಉಚಿತ ಮಾಸಿಕ ಪಡಿತರವನ್ನು 5 ಕೆಜಿಯಿಂದ 7 ಕೆಜಿಗೆ ಹೆಚ್ಚಿಸುವುದಾಗಿ ಮತ್ತು ಜಾರ್ಖಂಡ್ ನಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು 450 ರೂ.ಗೆ ನೀಡುವುದಾಗಿ ಭರವಸೆ ನೀಡಿದೆ.

ಯುವ ಮತದಾರರನ್ನು ಸೆಳೆಯಲು ಇಂಡಿಯಾ ಮೈತ್ರಿಕೂಟವು ಯುವಕರಿಗೆ 10 ಲಕ್ಷ ಉದ್ಯೋಗ ಮತ್ತು ಬಡವರಿಗೆ 15 ಲಕ್ಷ ರೂ.ಗಳ ಆರೋಗ್ಯ ರಕ್ಷಣೆಯ ಭರವಸೆ ನೀಡಿದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಆರ್ಜೆಡಿಯ ಜೆಪಿ ಯಾದವ್ ಅವರೊಂದಿಗೆ ಜಂಟಿಯಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನಮ್ಮ ಬಣವು ಯುವಕರಿಗೆ 10 ಲಕ್ಷ ಉದ್ಯೋಗಗಳು ಮತ್ತು ಬಡವರಿಗೆ 15 ಲಕ್ಷ ರೂ.ಗಳ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ” ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ