ಜಾರ್ಖಂಡ್ ಎನ್ ಕೌಂಟರ್: 2.5 ಲಕ್ಷ ರೂ.ಗಳ ಬಹುಮಾನ ಹೊಂದಿದ್ದ ಮುಖ್ತಾರ್ ಅನ್ಸಾರಿ ಗ್ಯಾಂಗ್ ಶಾರ್ಪ್ ಶೂಟರ್ ಹತ್ಯೆ - Mahanayaka
10:07 AM Thursday 11 - December 2025

ಜಾರ್ಖಂಡ್ ಎನ್ ಕೌಂಟರ್: 2.5 ಲಕ್ಷ ರೂ.ಗಳ ಬಹುಮಾನ ಹೊಂದಿದ್ದ ಮುಖ್ತಾರ್ ಅನ್ಸಾರಿ ಗ್ಯಾಂಗ್ ಶಾರ್ಪ್ ಶೂಟರ್ ಹತ್ಯೆ

30/03/2025

ಜೆಮ್ ಶೆಡ್ ಪುರದಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಯುಪಿ ಎಸ್ಟಿಎಫ್) ಮತ್ತು ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಶನಿವಾರ ತಡರಾತ್ರಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಮುಖ್ತಾರ್ ಅನ್ಸಾರಿ ಗ್ಯಾಂಗ್ ನ ಶಾರ್ಪ್ ಶೂಟರ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾರ್ಪ್ ಶೂಟರ್ ಅನ್ನು 50 ವರ್ಷದ ಅನುಜ್ ಕನೌಜಿಯಾ ಎಂದು ಗುರುತಿಸಲಾಗಿದೆ. ಎನ್ ಕೌಂಟರ್ ವೇಳೆ ಎಸ್ಟಿಎಫ್ ಡಿವೈಎಸ್ಪಿ ಡಿ.ಕೆ.ಶಾಹಿ ಗಾಯಗೊಂಡಿದ್ದಾರೆ.

ಎಸ್ಟಿಎಫ್ ಮತ್ತು ಜಾರ್ಖಂಡ್ ಪೊಲೀಸರು ಸ್ವೀಕರಿಸಿದ ಮಾಹಿತಿಯ ಆಧಾರದ ಮೇಲೆ ಅನುಜ್ ಕನೌಜಿಯಾ ಅವರನ್ನು ಸೆರೆಹಿಡಿಯಲು ಪ್ರಯತ್ನಿಸಿದರು. ಆದರೆ ಆತ ಭದ್ರತಾ ಪಡೆಗಳತ್ತ ಗುಂಡು ಹಾರಿಸಲು ಪ್ರಾರಂಭಿಸಿದರು. ಗುಂಡಿನ ಚಕಮಕಿಯಲ್ಲಿ ಅನುಜ್ ಕನೌಜಿಯಾ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಎಸ್ಟಿಎಫ್ ನ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಅಮಿತಾಬ್ ಯಶ್ ಸುದ್ದಿ ಸಂಸ್ಥೆ ಐಎಎನ್ಎಸ್ ಗೆ ತಿಳಿಸಿದ್ದಾರೆ.

ಐದು ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಕನೌಜಿಯಾ, ಕೊಲೆ, ಸುಲಿಗೆ, ಭೂ ಕಬಳಿಕೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ 23 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ. ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ಇತ್ತೀಚೆಗೆ ಆತನನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ನೀಡಿದವರಿಗೆ ಬಹುಮಾನವನ್ನು 1 ಲಕ್ಷ ರೂ.ಗಳಿಂದ 2.5 ಲಕ್ಷ ರೂ.ಗೆ ಹೆಚ್ಚಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ