ಕರ್ನಾಟಕದಲ್ಲಿ ಜಿಯೋಗೆ 2.95 ಲಕ್ಷ ಹೊಸ ಚಂದಾದಾರ ಸೇರ್ಪಡೆ: ಟ್ರಾಯ್
ಬೆಂಗಳೂರು: ಕರ್ನಾಟಕದಲ್ಲೂ ಜಿಯೋ ವೈರ್ ಲೆಸ್ ಮತ್ತು ವೈರ್ ಲೈನ್(Jio Wireless and Wireline) ಗಳೆರಡರಲ್ಲೂ ತನ್ನ ಪಾರಮ್ಯವನ್ನು ಮುಂದುವರಿಸಿದೆ. ಟ್ರಾಯ್ ನಿಂದ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಂತೆ, ಕರ್ನಾಟಕದಲ್ಲಿ 2.95 ಲಕ್ಷ ಮೊಬೈಲ್ ಚಂದಾದಾರರ ನಿವ್ವಳ ಸೇರ್ಪಡೆ ದಾಖಲಿಸಿದ್ದು, 2025ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಿಯೋದ ಒಟ್ಟು ಬಳಕೆದಾರರ ಸಂಖ್ಯೆ ರಾಜ್ಯದಲ್ಲಿ 2.56 ಕೋಟಿಗೆ ತಲುಪಿದೆ.
ಕರ್ನಾಟಕ ವೃತ್ತದಲ್ಲಿ ಸಕ್ರಿಯ ಜಿಯೋ ಏರ್ ಫೈಬರ್(Jio Air Fiber) ಚಂದಾದಾರರ ಸಂಖ್ಯೆ 2025ರ ಸೆಪ್ಟೆಂಬರ್ ತಿಂಗಳಲ್ಲಿ 3,74,894ಕ್ಕೆ ಏರಿತು, ಆಗಸ್ಟ್‌ನಲ್ಲಿ ಈ ಸಂಖ್ಯೆ 3,63,327 ರಷ್ಟಿತ್ತು -ಇನ್ನು ಜಿಯೋದ ಸಮೀಪ ಪ್ರತಿಸ್ಪರ್ಧಿ ಎನಿಸಿದ ಭಾರ್ತಿ ಏರ್ ಟೆಲ್ ಕೇವಲ 2,04,945 ಚಂದಾದಾರರನ್ನು ನೋಂದಾಯಿಸಿದೆ.
ಟ್ರಾಯ್ ಪ್ರಕಾರ, ಸೆಪ್ಟೆಂಬರ್ ಅಂತ್ಯದವರೆಗೆ ಜಿಯೋ ಸುಮಾರು 50 ಕೋಟಿ 54 ಲಕ್ಷ ಗ್ರಾಹಕರು ಮತ್ತು ಶೇ 50.77ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು ಮುಂಚೂಣಿಯಲ್ಲಿದೆ. ಏರ್‌ಟೆಲ್ ಸುಮಾರು 30.14 ಕೋಟಿ ಮತ್ತು ವೊಡಾ-ಐಡಿಯಾ ಸುಮಾರು 12 ಕೋಟಿ 78 ಲಕ್ಷ ಗ್ರಾಹಕರನ್ನು ಹೊಂದಿದೆ.
ಏರ್ ಟೆಲ್ (Airtel) ಶೇ 31.18 ಮತ್ತು ವೊಡಾ-ಐಡಿಯಾ(Voda–Idea) ಶೇ 12.83ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಸರ್ಕಾರಿ ಕಂಪನಿ ಬಿಎಸ್ಎನ್ಎಲ್ ಶೇ 3.49ರಷ್ಟು ಮಾರುಕಟ್ಟೆ ಹೊಂದಿದೆ.
ಸ್ಥಿರ ಬ್ರಾಡ್ ಬ್ಯಾಂಡ್ ವಲಯದಲ್ಲಿಯೂ ಜಿಯೋ ಪ್ರಾಬಲ್ಯ ಹೊಂದಿದೆ. 2025ರ ಸೆಪ್ಟೆಂಬರ್ ನಲ್ಲಿ ಒಟ್ಟು 3.22 ಲಕ್ಷ ಹೊಸ ಬ್ರಾಡ್‌ಬ್ಯಾಂಡ್ ಗ್ರಾಹಕರು ಜಿಯೋ ಸ್ಥಿರ ವೈರ್ ಲೆಸ್ ಸಂಪರ್ಕ (FWA) ಪಡೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























