Jio: ಜುಲೈ 3 ರಿಂದ ಹೊಸ ಅನ್‌ ಲಿಮಿಟೆಡ್ ಪ್ಲಾನ್ಸ್ - Mahanayaka
12:41 PM Monday 15 - September 2025

Jio: ಜುಲೈ 3 ರಿಂದ ಹೊಸ ಅನ್‌ ಲಿಮಿಟೆಡ್ ಪ್ಲಾನ್ಸ್

jio
28/06/2024

ಮುಂಬೈ : ದೂರಸಂಪರ್ಕ ಕ್ಷೇತ್ರದ ಅತಿದೊಡ್ಡ ಕಂಪನಿ ರಿಲಯನ್ಸ್ ಜಿಯೋ ಇನ್ಫೊಕಾಮ್ ಲಿಮಿಟೆಡ್, ಜುಲೈ 3 ರಿಂದ ಜಾರಿಗೆ ಬರುವಂತೆ ಹಲವು ಹೊಸ ಅನಿಯಮಿತ ಯೋಜನೆ (ಅನ್‌ಲಿಮಿಟೆಡ್ ಪ್ಲಾನ್) ಪ್ರಕಟಿಸಿದೆ.


Provided by

ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತದಲ್ಲಿ ತನ್ನ 5ಜಿ ಸಂಪರ್ಕವು ಬಹಳ ವೇಗವಾಗಿ ಬೆಳೆಯುತ್ತಿದ್ದು  ಶೇ 85ರವೆರೆಗೆ ತಲುಪಿದೆ ಎಂದು ತಿಳಿಸಿದೆ.

ತಿಂಗಳ ಯೋಜನೆ ₹189ಕ್ಕೆ  2ಜಿಬಿ ಇದ್ದು ವಾರ್ಷಿಕ ಯೋಜನೆ ₹3,599ರಲ್ಲಿ ದಿನಕ್ಕೆ 2.5 ಜಿಬಿ ಡೇಟಾ ಸಿಗಲಿದೆ. ದಿನಕ್ಕೆ 2 ಜಿಬಿ ಮತ್ತು ಅದಕ್ಕಿಂತ ಹೆಚ್ಚಿನ 5ಜಿ ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ.

ಅನಿಯಮಿತ 5ಜಿ ಡೇಟಾ ಸೇವೆಯು ದಿನಕ್ಕೆ 2ಜಿಬಿ ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋ ಹೆಮ್ಮೆಪಡುತ್ತದೆ. ನಮ್ಮ ದೇಶ ಮತ್ತು ಗ್ರಾಹಕರು ಕಂಪನಿಯ ಆದ್ಯತೆಯಾಗಿದೆ. ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಕಂಪನಿ ಮುಂದುವರಿಸಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ. ಅಂಬಾನಿ ಹೇಳಿದರು.

ದೇಶದಲ್ಲಿ ಡೇಟಾ ಬಳಕೆ ಮತ್ತು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿಸಲು ಜಿಯೋ ಕಂಪನಿಯು ಮಹತ್ವದ ಕೊಡುಗೆ ನೀಡುತ್ತಿದೆ. ಕಂಪನಿಯು ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟಿದ್ದರಿಂದ ಪ್ರತಿಸ್ಪರ್ಧಿ ಕಂಪನಿಗಳು ರಿಚಾರ್ಜ್ ದರ ತಗ್ಗಿಸುವಂತೆ ಮತ್ತು ಡೇಟಾ ಕೊಡುಗೆಯಲ್ಲಿ ಸುಧಾರಣೆ ತರುವಂತೆ ಆಗಿದೆ.

ಎರಡು ಹೊಸ ಆ್ಯಪ್:  ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ (JioSafe) ಮತ್ತು ಜಿಯೋ ಟ್ರಾನ್ಸ್‌ಲೇಟ್ (JioTranslate) ಎಂಬ ಎರಡು ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ ₹199 ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸುತ್ತದೆ. ‌ಜಿಯೋ ಟ್ರಾನ್ಸ್‌ಲೇಟ್ ಆ್ಯಪ್‌ನಲ್ಲಿ ತಿಂಗಳಿಗೆ ₹99 ನೀಡಿದರೆ, ಕೃತಕ ಬಿದ್ದಿಮತ್ತೆಯಿಂದ ಚಾಲಿತ ಆ್ಯಪ್, ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್‌ಗಳನ್ನು ಟ್ರಾನ್ಸ್‌’ಲೇಟ್ ಮಾಡಬಲ್ಲದು. ಜಿಯೋ ಬಳಕೆದಾರರಿಗೆ ಒಂದು ವರ್ಷದವೆರೆಗೆ ಈ ಎರಡೂ ಆ್ಯಪ್‌ಗಳು ಉಚಿತವಾಗಿರಲಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ