ಕೊಟ್ಟಿಗೆಗೆ ಬೆಂಕಿ: ಕಣ್ಣೆದುರೇ ಜೋಡೆತ್ತು ಭಸ್ಮ, ರೈತನ ಗೋಳಾಟ - Mahanayaka

ಕೊಟ್ಟಿಗೆಗೆ ಬೆಂಕಿ: ಕಣ್ಣೆದುರೇ ಜೋಡೆತ್ತು ಭಸ್ಮ, ರೈತನ ಗೋಳಾಟ

chamarajanagar
09/01/2023


Provided by

ಚಾಮರಾಜನಗರ: ಭತ್ತದ ಮೆದೆಗೆ ಬೆಂಕಿ ಹೊತ್ತಿಕೊಂಡು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜೋಡೆತ್ತು  ಸುಟ್ಟು ಕರಕಲಾದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ವೈ.ಕೆ.ಮೋಳೆ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ವೈ.ಕೆ.ಮೋಳೆ ಗ್ರಾಮದ  ಸಿದ್ದರಾಜು ಎಂಬ ರೈತ ಎತ್ತುಗಳನ್ನು ಕಳೆದುಕೊಂಡವರು. ಕಿಡಿಗೇಡಿಗಳ ಬೆಂಕಿಗೆ ಮೊದಲು ಹುಲ್ಲಿನ ಮೆದೆಗೆ ಬೆಂಕಿ ಹೊತ್ತಿಕೊಂಡಿದ್ದು ಬಳಿಕ ಕೊಟ್ಟಿಗೆಗೂ ವ್ಯಾಪಿಸಿ ಎರಡು ಎತ್ತುಗಳು ರೈತನ ಕಣ್ಣೆದುರೇ ಸುಟ್ಟು ಕರಕಲಾಗಿದೆ. ಇತ್ತೀಚಿಗಷ್ಟೇ 1.20 ಲಕ್ಷ ರೂ. ಕೊಟ್ಟು ಈ ಎತ್ತುಗಳನ್ನು ರೈತ ಖರೀದಿ ಮಾಡಿದ್ದರು ಎಂದು ತಿಳಿದುಬಂದಿದೆ.

ಕೊಳ್ಳೇಗಾಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ