ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಕಾಲಿಗೆ ಏಟು! - Mahanayaka
7:24 AM Thursday 15 - January 2026

ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಕಾಲಿಗೆ ಏಟು!

30/11/2020

ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರ ಕಾಲಿಗೆ ಆಕಸ್ಮಿಕವಾಗಿ ಗಾಯವಾಗಿದ್ದು,  ನಿನ್ನೆ ತಡ ರಾತ್ರಿ ತಮ್ಮ ಪ್ರೀತಿಯ ನಾಯಿಯ ಜೊತೆಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅವರು ಆಯತಪ್ಪಿ ಬಿದ್ದು ತೀವ್ರ ಗಾಯ ಮಾಡಿಕೊಂಡಿದ್ದಾರೆ.

ಘಟನೆ ನಡೆದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಅವರ ಬಲಗಾಲಿನ ಪಾದದ ಮೇಲೆ ಸೂಜಿ ಮೊನೆಯಷ್ಟು ಸೀಳು ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅವರು ನಡೆಯಲು ಅನುಕೂಲವಾಗುವ ಬೂಟುಗಳನ್ನು ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.



ಇನ್ನೂ ಜೋ ಬಿಡೆನ್ ಅವರು ಗಾಯಗೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟ್ವೀಟ್ ಮಾಡಿದ್ದು, ಜೋ ಬಿಡೆನ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಅವರು ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ