ನಟಿ ಫಾತಿಮಾ ವಿವಾದದ ಬಳಿಕ ಜೊತೆಯಾಗಿ ಲೈವ್ ಗೆ ಬಂದ ಅಮೀರ್ ಖಾನ್ - ಕಿರಣ್ ರಾವ್ ಹೇಳಿದ್ದೇನು? - Mahanayaka
1:17 PM Thursday 16 - October 2025

ನಟಿ ಫಾತಿಮಾ ವಿವಾದದ ಬಳಿಕ ಜೊತೆಯಾಗಿ ಲೈವ್ ಗೆ ಬಂದ ಅಮೀರ್ ಖಾನ್ – ಕಿರಣ್ ರಾವ್ ಹೇಳಿದ್ದೇನು?

aameerkhan kiran rao
04/07/2021

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ಅವರು ತಮ್ಮ 15 ವರ್ಷಗಳ ಬಳಿಕ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದರು. ಇವರ ಡಿವೋರ್ಸ್ ನ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದಂಗಲ್ ನಟಿ ಫಾತಿಮಾ ಹಾಗೂ ಅಮೀರ್ ಖಾನ್ ಸಂಬಂಧಗಳ ಬಗ್ಗೆ ಹಲವಾರು ಊಹಾಪೋಹಾಗಳು ಸೃಷ್ಟಿಯಾಗಿದ್ದವು.


Provided by

ಈ ಎಲ್ಲ ಬೆಳವಣಿಗೆಗಳ ನಡುವೆಯೇ ನಟ ಅಮೀರ್ ಖಾನ್  ಹಾಗೂ ಕಿರಣ್ ರಾವ್ ಜೋಡಿಯಾಗಿ ಜೂಮ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

ವಿಡಿಯೋದಲ್ಲಿ ಕಿರಣ್ ರಾವ್ ಅವರ ಕೈ ಹಿಡಿದುಕೊಂಡು ಮಾತನಾಡಿದ ಅಮೀರ್ ಖಾನ್, ನಮ್ಮ ಡಿವೋರ್ಸ್ ಕೇಸ್ ನಿಂದ ನೀವೆಲ್ಲರೂ ಶಾಕ್ ಗೊಳಗಾಗಿರುತ್ತೀರಿ, ಆದರೆ, ಒಂದು ವಿಷಯ ಹೇಳಲು ಇಚ್ಛಿಸುತ್ತೇವೆ. ನಾವಿಬ್ಬರೂ ಖುಷಿಯಿಂದಿದ್ದೇವೆ. ಒಂದೇ ಕುಟುಂಬದ ಭಾಗವಾಗಿದ್ದೇವೆ ಎಂದು ಹೇಳಿದರು.

ನಮ್ಮ ಸಂಬಂಧ ಬದಲಾಗಿರಬಹುದು ಆದರೆ ನಾವಿಬ್ಬರೂ ಜೊತೆಯಾಗಿದ್ದೇವೆ. ಇದರ ಬಗ್ಗೆ ಬೇರೆ ಏನೋ ಯೋಚಿಸಬೇಡಿ ಎಂದು ಅಮೀರ್ ಖಾನ್ ಹೇಳಿದರು. ಈ ವೇಳೆ ಕಿರಣ್ ರಾವ್ ಕೂಡ ಅಮೀರ್ ಖಾನ್ ಮಾತಿಗೆ ನಗುತ್ತಾ ತಲೆದೂಗಿದ್ದಾರೆ.

ಇತ್ತೀಚಿನ ಸುದ್ದಿ