ಕಟೌಟ್ ಗೆ ಮೇಕೆ ರಕ್ತದ ಅಭಿಷೇಕ: ಜ್ಯೂನಿಯರ್ ಎನ್.ಟಿ.ಆರ್. ಅಭಿಮಾನಿಗಳ ಬಂಧನ - Mahanayaka

ಕಟೌಟ್ ಗೆ ಮೇಕೆ ರಕ್ತದ ಅಭಿಷೇಕ: ಜ್ಯೂನಿಯರ್ ಎನ್.ಟಿ.ಆರ್. ಅಭಿಮಾನಿಗಳ ಬಂಧನ

junior ntr fans arrest
23/05/2023


Provided by

ಜ್ಯೂನಿಯರ್ ಎನ್.ಟಿ.ಆರ್ ಇತ್ತೀಚೆಗೆ ತಮ್ಮ 40ನೇ ಹುಟ್ಟುಹಬ್ಬವನ್ನು  ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬವನ್ನು  ಕರ್ನಾಟಕದ ಕೆಜಿಎಫ್ (KGF) ಸಮೀಪದ ರಾಬರ್ಟ್ ಸನ್ ಪೇಟ್ ನಲ್ಲಿ ಮಾತ್ರ ಹುಟ್ಟುಹಬ್ಬ ಆಚರಿಸಿ ಜೈಲು ಪಾಲಾಗಿದ್ದಾರೆ.

ಮೇ 20 ರಂದು ಜ್ಯೂನಿಯರ್ ಎನ್.ಟಿ.ಆರ್ ಅವರ ಹುಟ್ಟು ಹಬ್ಬವನ್ನು ಆಚರಿಸಲು ಕೆಲ ಅಭಿಮಾನಿಗಳು ಕೆಜಿಎಫ್ ಬಳಿಯ ರಾಬರ್ಟ್ ಸನ್ ಪೇಟ್ ಬಳಿ ಇರುವ ಚಿತ್ರ ಮಂದಿರಕ್ಕೆ ಬಂದಿದ್ದರು. ಅಂದು ಜ್ಯೂನಿಯರ್ ಅವರ ಸಿನಿಮಾ ಕೂಡ ಪ್ರದರ್ಶನವಾಗುತ್ತಿತ್ತು. ಥಿಯೇಟರ್ ಮುಂದೆ ಹಾಕಿದ್ದ ಪೋಸ್ಟರ್ ಮುಂದೆ ಎರಡು ಕುರಿಗಳನ್ನು ತಂದು ಕತ್ತರಿಸಿದ್ದಾರೆ ಅಭಿಮಾನಿಗಳು. ನಂತರ ರಕ್ತದಿಂದ ಪೋಸ್ಟರ್ ಗೆ ಅಭಿಷೇಕ ಮಾಡಿದ್ದಾರೆ.

ಈ ಮಾಹಿತಿ ಪೊಲೀಸರಿಗೆ ಸಿಗುತ್ತಿದ್ದಂತೆಯೇ ಅಭಿಮಾನಿ ಆರೋಪಿಗಳಾದ ನಾಗಭೂಷಣಂ, ಶಿವನಾಗ ರಾಜು, ಅನಿಲ್ ಕುಮಾರ್, ಶಿವ, ನಾಗೇಶ್ವರ ರಾವ್ ಸೇರಿದಂತೆ 9 ಜನ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ