ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಹಾಗೇ ಗುಜರಾತಲ್ಲಿ ಕೂಡಾ ಸೋಲಿಸ್ತೀವಿ: ರಾಹುಲ್ ಗಾಂಧಿ ಎಚ್ಚರಿಕೆ - Mahanayaka

ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಹಾಗೇ ಗುಜರಾತಲ್ಲಿ ಕೂಡಾ ಸೋಲಿಸ್ತೀವಿ: ರಾಹುಲ್ ಗಾಂಧಿ ಎಚ್ಚರಿಕೆ

06/07/2024


Provided by

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಹಾಗೆ ಮುಂದಿನ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಸೋಲಿಸಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಬಿಜೆಪಿಯವರು ನಮಗೆ ಸವಾಲೊಡ್ಡಿದ್ದಾಗಿ ರಾಹುಲ್‌ ಹೇಳಿದ್ದಾರೆ.

ನಮ್ಮ ಕಚೇರಿಯನ್ನು ಹಾನಿ ಮಾಡಿದ ಹಾಗೆ, ನಾವು ಅವರ ಸರ್ಕಾರವನ್ನು ಕಿತ್ತೊಗೆಯಲಿದ್ದೇವೆ. ಬರೆದಿಟ್ಟುಕೊಳ್ಳಿ, ಅಯೋಧ್ಯೆಯಲ್ಲಿ ಸೋಲಿಸಿದ ಹಾಗೆ, ಗುಜರಾತ್‌ನಲ್ಲಿ ಬಿಜೆಪಿ ಹಾಗೂ ಮೋದಿಯನ್ನು ನಾವು ಸೋಲಿಸಲಿದ್ದೇವೆ. ಗುಜರಾತ್‌ನಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್‌ ಹೊಸ ಆರಂಭ ಮಾಡಲಿದೆ’ ಎಂದು ರಾಹುಲ್ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಯವರ ಭಾಷಣದ ಅನಂತರ, ಬಿಜೆಪಿಯ ಯುವ ಮೊರ್ಚಾ ಕಾರ್ಯಕರ್ತರು ಅಹಮದಾಬಾದ್‌ನಲ್ಲಿರುವ ಕಾಂಗ್ರೆಸ್‌ ಕಚೇರಿ ‘ರಾಜೀವ್ ಗಾಂಧಿ’ ಭವನದ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಇದನ್ನು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ