ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಸಿಎಂ ಯಡಿಯೂರಪ್ಪ | ಜ್ವರವನ್ನು ನಿರ್ಲಕ್ಷ್ಯಿಸಿದ್ರಾ ಸಿಎಂ?
ಬೆಂಗಳೂರು: ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಜ್ವರದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಮಯ್ಯ ಮೆyeddyurappaಮೋರಿಯಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.
ಬೆಳಗಾವಿ ಚುನಾವಣೆ ಪ್ರಚಾರದ ಸಲುವಾಗಿ ನಿನ್ನೆ ಹೊಟೇಲೊಂದರಲ್ಲಿ ವಾಸ್ತವ್ಯ ಹೂಡಿದ್ದ ಸಿಎಂಗೆ ನಿನ್ನೆಯೂ ಜ್ವರ ಕಾಣಿಸಿಕೊಂಡಿತ್ತು. ಆದರೆ ಜ್ವರವನ್ನು ನಿರ್ಲಕ್ಷ್ಯಿಸಿದ್ದ ಯಡಿಯೂರಪ್ಪನವರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮಾಹಿತಿಗಳ ಪ್ರಕಾರ 2 ದಿನಗಳ ಹಿಂದಿ ಸಿಎಂ ಕೊವಿಡ್ 19 ಟೆಸ್ಟ್ ಮಾಡಿಸಿದ್ದು, ಅವರಿಗೆ ನೆಗೆಟಿವ್ ವರದಿ ಬಂದಿತ್ತು ಎಂದು ಹೇಳಲಾಗಿದೆ. ಜ್ವರದ ಹಿನ್ನೆಲೆಯಲ್ಲಿ ಅವರು ಮತ್ತೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ನಿನ್ನೆ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 10,497 ಸೇರಿದಂತೆ ರಾಜ್ಯಾಧ್ಯಂತ 14,738 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾಗಿತ್ತು. ಇವರಲ್ಲಿ ಇಂದು 3,591 ಜನರು ಸೇರಿದಂತೆ ಇದುವರೆದೆ 9,99,958 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ರಾಜ್ಯದಲ್ಲಿ 96,561 ಸಕ್ರೀಯ ಸೋಂಕಿತರು ಇರುವುದಾಗಿ ಆರೋಗ್ಯ ಇಲಾಖೆಯು ಕೊರೋನಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿತ್ತು.




























