ರೇಖಾ ಕದಿರೇಶ್ ಹತ್ಯೆ ಪ್ರಕರಣ: ಕದಿರೇಶ್ ಸಹೋದರಿ ಮಾಲಾ ಪುತ್ರ ಅರುಳ್ ಅರೆಸ್ಟ್! - Mahanayaka

ರೇಖಾ ಕದಿರೇಶ್ ಹತ್ಯೆ ಪ್ರಕರಣ: ಕದಿರೇಶ್ ಸಹೋದರಿ ಮಾಲಾ ಪುತ್ರ ಅರುಳ್ ಅರೆಸ್ಟ್!

arul arrest
27/06/2021


Provided by

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕದಿರೇಶ್ ಸಹೋದರಿ ಮಾಲಾ ಪುತ್ರ ಅರುಳ್ ಪಾತ್ರ ಖಚಿತವಾಗಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಪೊಲೀಸರು ಮಾಲಾ ಹಾಗೂ ಆಕೆಯ ಪುತ್ರ ಅರುಳ್ ನನ್ನು ಬಂಧಿಸಿದ್ದಾರೆ.

ಕೊಲೆಗೆ ಒಳಸಂಚು ಮಾಡಿದ ಆರೋಪ ಅರುಳ್ ಮೇಲೆ ಕೇಳಿ ಬಂದಿದ್ದು,  ಕಳೆದ ಮೂರು ದಿನಗಳಿಂದಲೂ ಅರುಳ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಆರೋಪಿಗಳಿಗೆ ಹಣಕಾಸಿನ ನೆರವು ಮತ್ತು ಬೇಲ್ ಗೆ ಸಹಾಯ ಮಾಡುವ ಭರವಸೆಯನ್ನು ಇವರು ನೀಡಿದ್ದರು ಎಂದು ಹೇಳಲಾಗಿದೆ. ಪೀಟರ್, ಸೂರ್ಯ ಜೊತೆಗೆ ಸೇರಿಕೊಂಡು ಅರುಳ್ ಕೊಲೆಗೆ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರೇಖಾ ಪತಿ ಕದಿರೇಶ್ ನ ಸಹೋದರಿ ಮಾಲಾ ಹೆಸರು ಕೂಡ ಈ ಕೊಲೆ ಪ್ರಕರಣದಲ್ಲಿ ಕೇಳಿ ಬಂದಿತ್ತು.  ಕದಿರೇಶ್ ಹತ್ಯೆಯ ಬಳಿಕ ಆಸ್ತಿ ಎಲ್ಲ ರೇಖಾಗೆ ಹೋಗಿತ್ತು. ಇದೇ ಕಾರಣಕ್ಕೆ ರೇಖಾ ವಿರುದ್ಧ ಒಳಸಂಚು ಹೂಡಲಾಗಿತ್ತು ಎನ್ನುವ ಅನುಮಾನಗಳು ಈಗ ಬಲಗೊಂಡಿವೆ. ಈ ಬಗ್ಗೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಸತ್ಯಾಂಶಗಳು ಹೊರಬರಲಿವೆ.

ಇತ್ತೀಚಿನ ಸುದ್ದಿ