ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದ ಧರ್ಮಸ್ಥಳದ ಸ್ನೇಕ್ ಪ್ರಕಾಶ್
ಬೆಳ್ತಂಗಡಿ; ತಾಲೂಕಿನ ನಿಡ್ಲೆ ಸಮೀಪ ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೇರೆ ಹಾವನ್ನು ನುಂಗಿದ ಬಳಿಕ ಮನೆಯೊಂದರ ಕೊಟ್ಟಿಗೆಯ ಸಮೀಪ ಕಾಣಿಸಿಕೊಂಡಿದ್ದು, ಧರ್ಮಸ್ಥಳದ ಸ್ನೇಕ್ ಪ್ರಕಾಶ್ ಅವರು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ನಿಡ್ಲೆ ಗ್ರಾಮದ ಬೂಡುಜಾಲು ನಿವಾಸಿ ಆದರ್ಶ ರಾವ್ ಎಂಬವರ ಮನೆಯ ಸಮೀಪ ಕಾಳಿಂಗ ಸರ್ಪ ಕೇರೆ ಹಾವನ್ನು ನುಂಗುತ್ತಿರುವುದನ್ನು ಮನೆಯವರು ನೋಡಿದ್ದಾರೆ. ಹಾವು ಬಳಿಕ ಕೊಟ್ಟಿಗೆಯ ಸಮೀಪಕ್ಕೆ ಬಂದಿದೆ. ಮನೆಯವರು ಈ ಬಗ್ಗೆ ಕೂಡಲೇ ಸ್ನೇಕ್ ಪ್ರಕಾಶ್ ಅವರಿಗೆ ಮಾಹಿತಿ ನೀಡಿದ್ದಾರೆ ಪ್ರಕಾಶ್ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಪ್ರಕಾಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಧರ್ಮಸ್ಥಳ ಗ್ರಾಮದ ಸಂಯೋಜಕರಾಗಿದ್ದು ಹಾವುಗಳನ್ನು ಹಿಡಿಯುವುದರಲ್ಲಿ ಪರಿಣತರಾಗಿದ್ದಾರೆ. ಈಗಾಗಲೆ ಹಲವು ಕಾಳಿಂಗ ಸರ್ಪಗಳನ್ನು ರಕ್ಷಿಸಿರುವ ಇವರ ಕಾರ್ಯ ಎಲ್ಲರ ಮೆಚ್ಚುಗೆಗ ಪಾತ್ರವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























