“ಅವನೆಂಥಾ ಹಿಂದೂತ್ವರಿ?” : ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ - Mahanayaka
2:31 PM Tuesday 16 - September 2025

“ಅವನೆಂಥಾ ಹಿಂದೂತ್ವರಿ?” : ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ

prabhakar bhat
28/04/2023

ಪುತ್ತೂರು:  ಹೆಣ್ಣು ಮಗಳು ಡ್ರೈವಿಂಗ್ ಮಾಡ್ತಾ ಹೋಗುತ್ತಿದ್ದಾಗ ಬಿದ್ದು ಸತ್ತಾಗ ಅದನ್ನು ನೋಡದೇ ಹೋದ ಮಾನವೀಯತೆ ಇಲ್ಲದವರು, ಯಾವುದೋ ಒಬ್ಬ ರವೀಂದ್ರ ಪೂಜಾರಿಯ ಮನೆಯ ಜಾಗದಲ್ಲಿ ದಾರಿ ಕೊಡಬೇಕು ಅಂತ 307 ಹಾಕಿಸಿಕೊಂಡವನು ಅವನೆಂಥಾ ಹಿಂದೂತ್ವರಿ?  ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹಿಂದೂ ನಾಯಕ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


Provided by

ಪ್ರವೀಣ್ ನೆಟ್ಟಾರು ಮನೆ ಗೃಹ ಪ್ರವೇಶಕ್ಕೆ ಆಗಮಿಸಿದ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ವಿಶ್ವವೇ ಬಿಜೆಪಿಯನ್ನು ಹಿಂದುತ್ವ ಪಾರ್ಟಿ, ಕಮ್ಯುನಲ್ ಪಾರ್ಟಿ ಎಂದು ಹೇಳುತ್ತಿದೆ. ಬಿಜೆಪಿಗಿಂತ ದೊಡ್ಡ ಹಿಂದುತ್ವವೇ ಇಲ್ಲ ಎಂದು ಪ್ರಭಾಕರ್ ಭಟ್ ಹೇಳಿದರು.

ಅರುಣ್ ಪುತ್ತಿಲ ಹಿಂದುತ್ವಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ, ಗೋ ಸಾಗಾಟ ಗುಂಪಿನಲ್ಲಿ ಎಲ್ಲರೂ ಇದ್ದಾರೆಂದು ಮುಂದೆ ನಿಂತಿರಬಹುದು, ಅಮಿತ್ ಷಾ ಮಾತನ್ನೇ ಧಿಕ್ಕರಿಸಿದ ವ್ಯಕ್ತಿ ಹಿಂದುತ್ವಕ್ಕಾಗಿ ಏನು ಮಾಡಬಹುದು? ಎಂದು ಅವರು ಪ್ರಶ್ನಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ