ಕಳ್ಳನನ್ನು 1 ಕಿ.ಮೀ. ದೂರ ಬೆನ್ನಟ್ಟಿ ಹಿಡಿದ ಪೊಲೀಸ್ | ವಿಡಿಯೋ ವೈರಲ್ - Mahanayaka
1:14 AM Saturday 18 - October 2025

ಕಳ್ಳನನ್ನು 1 ಕಿ.ಮೀ. ದೂರ ಬೆನ್ನಟ್ಟಿ ಹಿಡಿದ ಪೊಲೀಸ್ | ವಿಡಿಯೋ ವೈರಲ್

police
13/01/2022

ಮಂಗಳೂರು: ಯುವಕನೋರ್ವನ ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನು ಮಂಗಳೂರಿನ ಪೊಲೀಸ್ ವೊಬ್ಬರು ಬೆನ್ನಟ್ಟಿ ಹಿಡಿದ ಸಿನಿಮೀಯ ಶೈಲಿಯ ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

ವರದಿಯ ಪ್ರಕಾರ, ನೆಹರೂ ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಮೊಬೈಲ್ ನ್ನು ಕಳ್ಳ ಕದ್ದು ಪರಾರಿಯಾಗುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಮೊಬೈಲ್ ಕಳೆದುಕೊಂಡ ವ್ಯಕ್ತಿ ಆತನನ್ನು  ಬೆನ್ನಟ್ಟಿದ್ದಾರೆ. ಈ ವೇಳೆ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಪೊಲೀಸ್ ವೊಬ್ಬರು ವ್ಯಕ್ತಿಯನ್ನು ಹಿಡಿದಿದ್ದಾರೆ.

ಇನ್ನೂ ಕಳ್ಳನನ್ನು ಹಿಡಿದು, “ಈ  ಪಂ*** ಬ್ಯಾವರ್ಸಿ,  ನೀನು ಒಬ್ಬನೇ ಓಡೋದಾ, ಬ್ಯಾವರ್ಸಿ” ಎಂದು ಕಳ್ಳನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಳ್ಳ, ನಾನೇನು ಮಾಡಿಲ್ಲ, ಅವನಿಗೆ ಯಾರೋ ಹೊಡೆದರು ಅದಕ್ಕೆ ನಾನು ಬಂದ್ದದ್ದು ಎಂದು ಕಾರಣ ಹೇಳಿದ್ದಾನೆ.

ಇನ್ನೂ ಕಳ್ಳತನ ನಡೆದು ಕೆಲವೇ ನಿಮಿಷಗಳಲ್ಲಿ ಸುಮಾರು 1 ಕಿ.ಮೀ. ದೂರ ಕಳ್ಳನನ್ನು ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಕಳ್ಳನನ್ನು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ!

ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಆದೇಶ

ಉದ್ಘಾಟನೆಗೊಂಡು ಒಂದೇ ದಿನದಲ್ಲಿ ಬಾಗಿಲು ಮುಚ್ಚಿದ ಆಸ್ಪತ್ರೆ!

ಕೋತಿಯ ಅಂತ್ಯಸಂಸ್ಕಾರ ಮಾಡಿ, ತಿಥಿ ಊಟ ಬಡಿಸಿದ್ದಕ್ಕೆ ಜನರ ಮೇಲೆ ಕೇಸ್!

ಬಿಜೆಪಿ ತೊರೆದು 24 ಗಂಟೆಗಳಲ್ಲೇ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಅರೆಸ್ಟ್ ವಾರೆಂಟ್!

ಇತ್ತೀಚಿನ ಸುದ್ದಿ