ಉಡುಪಿ: ಮನೆಗೆ ನುಗ್ಗಿದ ಕಳ್ಳರು ದೋಚಿದ್ದು ಬರೋಬ್ಬರಿ 18.35 ಲಕ್ಷ ರೂ.ಗಳ ಸೊತ್ತು! - Mahanayaka
12:17 PM Saturday 25 - October 2025

ಉಡುಪಿ: ಮನೆಗೆ ನುಗ್ಗಿದ ಕಳ್ಳರು ದೋಚಿದ್ದು ಬರೋಬ್ಬರಿ 18.35 ಲಕ್ಷ ರೂ.ಗಳ ಸೊತ್ತು!

theft
08/11/2021

ಉಡುಪಿ:  ಮನೆಗೆ ನುಗ್ಗಿದ ಕಳ್ಳರು  ನಗದು, ಚಿನ್ನಾಭರಣ ಸೇರಿದಂತೆ ಸುಮಾರು 18.35 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಉಡುಪಿಯ ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್ ನಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಜಯಗಣೇಶ್ ಬೀಡು ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನವೆಂಬರ್ 6ರ ಸಂಜೆ 6:15ರ  ಹಾಗೂ ನವೆಂಬರ್ 7ರ ಬೆಳಗ್ಗೆ 10:45ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಮನೆಯೊಳಗೆ ಪ್ರವೇಶಿಸಿ ಕಳವು ನಡೆಸಿದ್ದಾರೆ ಎಂದು ಉಡುಪಿ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಬಳೆಗಳು, ಮುತ್ತಿನ ಸರ, ಉಂಗುರ, ವಜ್ರದ ಕಿವಿ ಓಲೆ, ನಕ್ಲೇಸ್ ಮೊದಲಾದ 14 ಲಕ್ಷ ರೂ. ಮೌಲ್ಯದ 332 ಗ್ರಾಂ. ತೂಕದ ಚಿನ್ನಾಭರಣಗಳು ಹಾಗೂ ಗೆಸ್ಟ್ ರೂಮ್ ನ ಲಾಕರ್ ನಲ್ಲಿದ್ದ  3 ಲಕ್ಷ ರೂಪಾಯಿ ಮತ್ತು 1 ಲಕ್ಷದ 35 ಸಾವಿರ ರೂ ಮೌಲ್ಯದ 45 ಹಳೆಯ ಬೆಳ್ಳಿಯ ನಾಣ್ಯಗಳನ್ನು ಕಳವು ಮಾಡಲಾಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು 18.35 ಲಕ್ಷ ರೂ. ಅಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ