ಕಾಲು ಸೇತುವೆ ದಾಟುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು  ನೀರುಪಾಲು - Mahanayaka
10:20 AM Thursday 11 - December 2025

ಕಾಲು ಸೇತುವೆ ದಾಟುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು  ನೀರುಪಾಲು

bainduru
08/08/2022

ಬೈಂದೂರು: ಶಾಲೆಯಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಯೊಬ್ಬಳು ಕಾಲು ಸೇತುವೆ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದು ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಇಂದು ಸಂಜೆ ವೇಳೆ ಬೀಜಮಕ್ಕಿ ಎಂಬಲ್ಲಿ ನಡೆದಿದೆ.

ನೀರುಪಾಲಾಗಿರುವ ವಿದ್ಯಾರ್ಥಿನಿ ಬೊಳಂಬಳ್ಳಿಯ ಮಕ್ಕಿಮನೆಯ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿ ಪುತ್ರಿ ಸನ್ನಿಧಿ(7) ಎಂಬಾಕೆಗೆ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿಯಾಗಿರುವ ಸನ್ನಿಧಿ ಸಂಜೆ ಶಾಲೆ ಬಿಟ್ಟು ಮನೆಗೆ ಬರುವಾಗ ದಾರಿ ಮಧ್ಯೆ ಸಿಗುವ ಕಾಲು ಸಂಕ ದಾಟುತ್ತಿದ್ದರು. ಈ ವೇಳೆ ಆಕೆ ಆಯಾ ತಪ್ಪಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ.

ಸ್ಥಳಕ್ಕೆ ಶಾಸಕ ಸುಕುಮಾರ್ ಶೆಟ್ಟಿ, ತಹಶೀಲ್ದಾರ್ ಕಿರಣ್ ಗೋರಯ್ಯ, ಬೈಂದೂರು ಎಸ್ಸೈ ಪವನ್ ನಾಯಕ್ ಭೇಟಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ