ಕ್ಷಮೆ ಕೇಳಿ ಕಮಲ್ ಹಾಸನ್: ಅಂಗಲಾಚಿ ಬೇಡಿ ಕ್ಷಮೆ ಕೇಳಿಸುವ ಅಗತ್ಯವಿದೆಯೇ?

‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬ ನಟ ಕಮಲ್ ಹಾಸನ್ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಕೇಳಲಾಯಿತು.
‘ಥಗ್ ಲೈಫ್’ ಚಿತ್ರದ ಕರ್ನಾಟಕದ ವಿತರಕ ವೆಂಕಟೇಶ್ ಅವರ ಕೋರಿಕೆ ಮೇರೆಗೆ ಕಮಲ್ ಗೆ ಮತ್ತೆ 24 ಗಂಟೆ ಟೈಮ್ ಕೊಟ್ಟಿದೆ. ಕಮಲ್ ಹಾಸನ್ ತನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದರೂ ಮತ್ತೆ 24 ಗಂಟೆಯ ಸಮಯಾವಕಾಶ ನೀಡಿ ಕ್ಷಮೆ ಕೇಳಲು ಗಡುವು ನೀಡಲಾಗಿದೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಕಮಲ್ ಹಾಸನ್ ಕ್ಷಮೆ ಕೇಳೋ ಚಾನ್ಸೇ ಇಲ್ಲ ಎಂದು ಅನಿಸುತ್ತಿದೆ. ಎಲ್ಲರ ಜೊತೆ ಚರ್ಚೆ ಮಾಡುತ್ತೇವೆ. ಎಲ್ಲರ ಅನಿಸಿಕೆ ಏನಿದೆ ಎಂಬುದನ್ನು ನೋಡುತ್ತೇವೆ. ಸದ್ಯ ಕಮಲ್ ಹಾಸನ್ ದುಬೈನಲ್ಲಿದ್ದಾರೆ ನಾಳೆ ಚೆನ್ನೈಗೆ ಬರ್ತಾರೆ, ಮಂಗಳವಾರ 12 ಗಂಟೆವರೆಗೆ ಸಮಯ ಕೊಡಿ ಎಂದು ವಿತರಕರು ಕೇಳಿದ್ದಾರೆ ಎಂದರು.
ಕಮಲ್ ಹಾಸನ್ ಕ್ಷಮೆ ಕೇಳುತ್ತಾರಾ ಎಂದು ಕಾದು ಕುಳಿತುಕೊಳ್ಳುವ ಅವಶ್ಯಕತೆ ಇದೆಯಾ ಎನ್ನುವ ಪ್ರಶ್ನೆಗಳಿ ವ್ಯಾಪಕವಾಗಿ ಕೇಳಿ ಬಂದಿದೆ. ಕ್ಷಮೆ ಕೇಳಿ ಎಂದು ಅಂಗಲಾಚುವ ಸ್ಥಿತಿ ಇದು. ಕಮಲ್ ಹಾಸನ್ ತಾನು ಕ್ಷಮೆ ಯಾಚಿಸುವುದಿಲ್ಲ ಎಂದು ಗಟ್ಟಿ ನಿರ್ಧಾರ ತೆಗೆಯಲು ಸಾಧ್ಯವಾಗುವುದಿದ್ದರೆ, ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವ ನಿರ್ಧಾರ ತೆಗೆದುಕೊಳ್ಳಲು ಇಷ್ಟೊಂದು ಸಮಯ ಬೇಕೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD