ಸಂಸದೆ ಜೊತೆಗೆ ಟಿಕೆಟ್ ವಿವಾದದ ನಂತರ ಕೆಲಸ ತೊರೆದ ಬಸ್ ಚಾಲಕಿಗೆ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್! - Mahanayaka
11:27 AM Wednesday 17 - December 2025

ಸಂಸದೆ ಜೊತೆಗೆ ಟಿಕೆಟ್ ವಿವಾದದ ನಂತರ ಕೆಲಸ ತೊರೆದ ಬಸ್ ಚಾಲಕಿಗೆ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್!

kamal haasan gift
26/06/2023

ಡಿಎಂಕೆ ಸಂಸದೆ ಕನಿಮೋಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದ ಹಿನ್ನೆಲೆಯಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಮಹಿಳಾ ಬಸ್ ಚಾಲಕಿಗೆ ನಟ–ರಾಜಕಾರಣಿ ಕಮಲ್ ಹಾಸನ್ ಸೋಮವಾರ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮಹಿಳಾ ಬಸ್ ಚಾಲಕಿಯಾಗಿರುವ ಶರ್ಮಿಳಾಗೆ ‘ಕಮಲ್ ಪನ್ಬಟ್ಟು ಮೈಯಂ’ (ಕಮಲ್ ಕಲ್ಚರಲ್ ಸೆಂಟರ್) ವತಿಯಿಂದ ಕಾರನ್ನು ನೀಡಲಾಗಿದೆ.

ಚಾಲಕ-ಉದ್ಯಮಿಯಾಗಲು ಅನುವು ಮಾಡಿಕೊಡಲು ಈ ಕಾರನ್ನು ನೀಡಲಾಗಿದೆ.  ಶರ್ಮಿಳಾ ಕುರಿತ ಇತ್ತೀಚಿನ ಚರ್ಚೆಯ ಬಗ್ಗೆ ನಾನು ದುಃಖಿತನಾಗಿದ್ದೆ. ಶರ್ಮಿಳಾ ಕೇವಲ ಚಾಲಕಿಯಾಗಿ ಉಳಿಯಬಾರದು. ಅನೇಕ ಶರ್ಮಿಳಾರನ್ನು ಸೃಷ್ಟಿಸಬೇಕೆಂಬುದು ನನ್ನ ನಂಬಿಕೆ. ಆಕೆ ಈಗ ಕಾರನ್ನು ಬಾಡಿಗೆ ಸೇವೆಗಾಗಿ ಬಳಸುತ್ತಾಳೆ ಮತ್ತು ಮುಂದೆ ಉದ್ಯಮಿಯಾಗುತ್ತಾಳೆ ಎಂದು ಅವರು ಹೇಳಿದ್ದಾರೆ.

ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ನಲ್ಲಿ ಕಳೆದ ವಾರ ಗಾಂಧಿಪುರಂನಿಂದ ಕೊಯಮತ್ತೂರಿನ ಪೀಲಮೇಡುವಿಗೆ ಕನಿಮೊಳಿ ಪ್ರಯಾಣಿಸಿದ್ದರು. ಈ ವೇಳೆ ಅವರ ಬಳಿ ಟಿಕೆಟ್ ಇದ್ದರೂ ಡಿಎಂಕೆ ಸಂಸದರನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಕಂಡಕ್ಟರ್ ಜೊತೆಗೆ ವಾಗ್ವಾದ ನಡೆದಿತ್ತು.

ಶರ್ಮಿಳಾ ಅವರು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಬಳಿಕ ಅವರು, ಚಾಲಕಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ