ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಡಬ್ಬಿ ಜೊತೆಗೆ ಸಿಸಿ ಕ್ಯಾಮರಾವನ್ನೂ ಕದ್ದೊಯ್ದ ಕಳ್ಳರು! - Mahanayaka

ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಡಬ್ಬಿ ಜೊತೆಗೆ ಸಿಸಿ ಕ್ಯಾಮರಾವನ್ನೂ ಕದ್ದೊಯ್ದ ಕಳ್ಳರು!

vishanu murthy temple
24/08/2022


Provided by

ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ವಿಷ್ಣು ಮೂರ್ತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಒಡೆದು ಅದರಲ್ಲಿದ್ದ ಹಣ ಹಾಗೂ ಸಿಸಿ ಕ್ಯಾಮೆರಾ  ಹಾಗೂ ಇತರ ಉಪಕರಣಗಳನ್ನೂ ಕದ್ದೊಯ್ದ  ಘಟನೆ ಸಂಭವಿಸಿದೆ.

ಮಂಗಳವಾರ ರಾತ್ರಿ ದೇವಸ್ಥಾನದ ಹಿಂಬಾಗಿಲು ಒಡೆದು ಒಳ ನುಗ್ಗಿದ ಕಳ್ಖರು ದೇವಸ್ಥಾನದ ಗರ್ಭಗುಡಿ, ಉಗ್ರಾಣ, ಕಚೇರಿ ಕೊಠಡಿ, ಉಗ್ರಾಣದ ಬೀಗಗಳನ್ನು ಒಡೆದಿದ್ದಾರೆ. ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಅಪಹರಿಸಿದ್ದಾರೆ. ಕಚೇರಿಯಲ್ಲಿದ್ದ ಸಿಸಿ ಕ್ಯಾಮರಾ, ಮಾನಿಟರ್, ಡಿ.ವಿ.ಆರ್, ಪವರ್ ಬಾಕ್ಸ್ ಗಳನ್ನೂ  ಕೊಂಡೊಯ್ದಿದ್ದಾರೆ.

ಬೆಳಿಗ್ಗೆ ಕಳ್ಳತನವಾಗಿರುವ ವಿಚಾರ ಗಮನಕ್ಕೆ ಬಂದಿದ್ದು ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ