ಸಿನಿಮಾಕ್ಕಾಗಿ ಕಾರು ಮಾರಾಟ ಮಾಡಿದ ಕನ್ನಡ ನಟ: ಕಣ್ಣೀರು ಹಾಕಿದ ಪುಟ್ಟ ಮಗಳು! - Mahanayaka

ಸಿನಿಮಾಕ್ಕಾಗಿ ಕಾರು ಮಾರಾಟ ಮಾಡಿದ ಕನ್ನಡ ನಟ: ಕಣ್ಣೀರು ಹಾಕಿದ ಪುಟ್ಟ ಮಗಳು!

ajay rao
09/04/2025


Provided by

ಎಕ್ಸ್‌ ಕ್ಯೂಸ್‌ ಮಿ, ತಾಜ್‌ ಮಹಲ್‌, ಪ್ರೇಮ್‌ ಕಹಾನಿ, ಕೃಷ್ಣನ್‌ ಲವ್‌ ಸ್ಟೋರಿ ಮೊದಲಾದ ಸಿನಿಮಾಗಳ ಮೂಲಕ ಯಶಸ್ವಿ ನಟರಾಗಿ ಹೊರ ಹೊಮ್ಮಿದ್ದ ಅಜಯ್ ರಾವ್ ಇದೀಗ ಯುದ್ಧಕಾಂಡ ಸಿನಿಮಾವನ್ನ ಮಾಡುತ್ತಿದ್ದಾರೆ. ಈಗಾಗಲೇ ಅವರು ತನಗೆ ಕೋಟಿಗಟ್ಟಲೆ ಸಾಲ ಇದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮ ಅಚ್ಚುಮೆಚ್ಚಿನ ಬಿಎಂಡಬ್ಲ್ಯೂ ಕಾರನ್ನು ಅವರು ಮಾರಾಟ ಮಾಡಿದ್ದಾರೆ.

ತಮ್ಮದೇ ನಿರ್ಮಾಣದಲ್ಲಿ ಅಜಯ್ ರಾವ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಸಕ್ಸಸ್ ಆಗುತ್ತದೆ ಎನ್ನುವ ಭರವಸೆಯಲ್ಲಿದ್ದಾರೆ. ಇದೀಗ ಅವರ ಕಾರು ಮಾರಾಟ ಒಂದು ಭಾವನಾತ್ಮಕ ಸಂದರ್ಭಕ್ಕೆ ಸಾಕ್ಷಿಯಾಯಿತು.

ಕಾರು ಮಾರಾಟದ ವೇಳೆ ಅಜಯ್ ರಾವ್ ಅವರ ಮಗಳು ಚೆರಿಷ್ಮಾ ಭಾವುಕಳಾದಳು,  ಕಾರು ಮಾರಾಟ ಮಾಡುವುದು ಬೇಡ ಎಂದು ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ಕಾರು ಮಾರಾಟ ಮಾಡುವುದು ಬೇಡ, ನನಗೆ ಇದೇ ಕಾರು ಬೇಕು ಎಂದು ಕಾರನ್ನು ತಬ್ಬಿಕೊಂಡು ಚರಿಷ್ಮಾ ಕಣ್ಣೀರು ಹಾಕಿದ್ದಾಳೆ. ಈ ವೇಳೆ ಹೊಸ ಕಾರು ತೆಗೆದುಕೊಳ್ಳೋಣ ಎಂದು ಅಜಯ್ ರಾವ್ ಪುತ್ರಿಯನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದ ಅಜಯ್ ರಾವ್  ಬಣ್ಣದ ಬದುಕು ಹಾಗೂ ವೈಯಕ್ತಿಕ ಜೀವನದಲ್ಲಿ ಏರುಪೇರು ಅನುಭವಿಸಿದ್ದರು. ಸಿನಿಮಾಕ್ಕಾಗಿ ಕೋಟಿ ಕೋಟಿ ಸಾಲವನ್ನೂ ಮಾಡಿದ್ದಾರಂತೆ, ಸದ್ಯ ಯುದ್ಧಕಾಂಡ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು,  ಏಪ್ರಿಲ್ 18ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ