ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ! - Mahanayaka
8:41 PM Thursday 6 - November 2025

ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ!

harish rai
06/11/2025

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದರು.  ಅಂತಿಮವಾಗಿ ಅವರು ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.

ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದಾಗಿ ತಮ್ಮ ಗುರುತೇ ಸಿಗದಷ್ಟು ಬದಲಾವಣೆ ಅವರ ದೇಹದಲ್ಲಾಗಿತ್ತು.  ತಮ್ಮ ಚಿಕಿತ್ಸೆಗಾಗಿ ನೆರವು ನೀಡುವಂತೆಯೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದರು. ಹಲವು ನಿರ್ಮಾಪಕರು ಹಾಗೂ ನಟರು ಅವರಿಗೆ ನೆರವಾಗಿದ್ದರು.

‘ಓಂ’, ‘ನಲ್ಲ’ ಸೇರಿದಂತೆ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಹರೀಶ್ ರಾಯ್ ನಟಿಸಿದ್ದರು. ಓಂ ಚಿತ್ರ ಅವರ ವೃತ್ತಿ ಜೀವನಕ್ಕೆ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾವಾಗಿತ್ತು. ಹಾಗೂ ಕೆಜಿಎಫ್ ಚಿತ್ರದ ಮೂಲಕ ಅವರು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ್ದರು.

ಅನಾರೋಗ್ಯದ ವಿಚಾರ ತಿಳಿದು ಹಲವಾರು ನಟರು ಹರೀಶ್ ರಾಯ್ ಅವರನ್ನು ಭೇಟಿ ಮಾಡಿದ್ದರು. ಹಲವು ಯೂಟ್ಯೂಬರ್ಸ್ ಕೂಡ ಹರೀಶ್ ರಾಯ್ ಅವರನ್ನು ಮಾತನಾಡಿಸಿದ್ದರು. ಕರಾವಳಿ ಮೂಲದ ಹರೀಶ್ ರಾಯ್ ಅವರು  90ರ ದಶಕದ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿದ್ದರು. ಹರೀಶ್ ರಾಯ್ ಅವರು ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ