ಮಹಾರಾಷ್ಟ್ರದ ಪುಂಡರಿಗೆ ಪೊರಕೆ ಏಟಿನ ಪ್ರತಿಭಟನೆ- ರಸ್ತೆ ತಡೆ - Mahanayaka
2:24 AM Wednesday 29 - October 2025

ಮಹಾರಾಷ್ಟ್ರದ ಪುಂಡರಿಗೆ ಪೊರಕೆ ಏಟಿನ ಪ್ರತಿಭಟನೆ– ರಸ್ತೆ ತಡೆ

kannada protest
29/11/2022

ಚಾಮರಾಜನಗರ: ಮಹಾರಾಷ್ಟ್ರದಲ್ಲಿ ರಾಜ್ಯದ ವಿರುದ್ಧ ನಡೆಸುತ್ತಿರುವ ಪುಂಡಾಟಿಕೆ ಖಂಡಿಸಿ ಚಾಮರಾಜನಗರದಲ್ಲಿಂದು ಕನ್ನಡಪರ ಹೋರಾಟಗಾರರು ಪೊರಕೆ ಏಟಿನ ಚಳವಳಿ ನಡೆಸಿದರು.

ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಭುವನೇಶ್ವರಿ ವೃತ್ತದವತೆಗೆ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಹಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ರಾಜಕೀಯ ಕಾರಣಗಳಿಗಾಗಿ ಗಡಿ ಕ್ಯಾತೆ ತೆಗೆಯುತ್ತಿದ್ದು ಅವರಿಗೆ ಒಂದಿಂಚು ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲಾ, ಬಸ್ ಗಳ ಮೇಲೆ, ಕನ್ನಡಿಗರ ಮೇಲೆ ಅವರು ಕಿಡಿಗೇಡಿತನ ಮುಂದುವರೆಸಿದರೇ ತಕ್ಕಶಾಸ್ತಿ ಮಾಡುತ್ತೇವೆ, ಕೇಂದ್ರ ಸರ್ಕಾರಕ್ಕೆ ಗೌರವ ಇದ್ದದ್ದೇ ಅದರೆ ಮಹಾರಾಷ್ಟ್ರ ಸರ್ಕಾರವನ್ನು  ವಜಾಗೊಳಿಸ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೈಯಲ್ಲಿ ಪೊರಕೆ ಹಿಡಿದು ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ