ಸೌಹಾರ್ದತೆಗೆ ಸಾಕ್ಷಿಯಾದ ಟೈಲರ್ ಕನ್ಹಯ್ಯಾ ಲಾಲ್ ಊರು
ರಾಜಸ್ಥಾನದ ಉದಯಪುರ ಎಂದರೆ ಸಾಕು, ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯನ್ನು ಜನರು ನೆನಪಿಸಿಕೊಳ್ಳುತ್ತಾರೆ. ಆದರೆ ಇದೀಗ ಉದಯಪುರ ಹಿಂದೂ-ಮುಸಲ್ಮಾನರ ಸೌಹಾರ್ದತೆಗೆ ಸುದ್ದಿಯಾಗಿದೆ.
ಮೊಹರಂ ಆಚರಣೆ ವೇಳೆ ಉದಯಪುರ ಹಿಂದೂ ಮುಸ್ಲಿಮರ ಸೌಹಾರ್ದತೆಗೆ ಸಾಕ್ಷಿಯಾಯಿತು. ರಾಜಸ್ಥಾನದ ಉದಯಪುರ ನಗರದಲ್ಲಿ ಮೊಹರಂ ಮೆರವಣಿಗೆ ನಡೆಯುತ್ತಿತ್ತು. ಈ ವೇಲೆ ಮೋಚಿವಾಡ ಪ್ರದೇಶದ ಕಿರಿದಾದ ಬೀದಿಯಲ್ಲಿ ಮೆರವಣಿಗೆ ಸಾಗುತ್ತಿದ್ದ ವೇಳೆ 25 ಅಡಿ ಎತ್ತರದ ತಜಿಯಾ(ತೇರು) ಮೇಲಿನ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
25 ಅಡಿ ಎತ್ತರದಲ್ಲಿ ಹತ್ತಿಕೊಂಡಿದ್ದ ಬೆಂಕಿ ಯಾರಿಗೂ ಕಾಣಿಸಿರಲಿಲ್ಲ. ಆದರೆ, ಜನವಸತಿ ಪ್ರದೇಶವಾಗಿರುವುದರಿಂದ ಮಹಡಿಗಳ ಮೇಲೆ ನಿಂತು ದೃಶ್ಯ ವೀಕ್ಷಿಸುತ್ತಿದ್ದ ಹಿಂದೂ ಕುಟುಂಬಗಳ ಗಮನಕ್ಕೆ ಬಂದಿದ್ದು, ತಕ್ಷಣವೇ ಬಕೆಟ್ ಮೂಲಕ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಸುಟ್ಟು ಹೋದ ಪ್ರದೇಶಕ್ಕೆ ಕೆಂಪು ಬಣ್ಣದ ಸೀರೆಯನ್ನು ಮುಚ್ಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಅಗರ ಬತ್ತಿ ಅಥವಾ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























