ಕಾಂತಾರ ಚಾಪ್ಟರ್ 1ರ ಶೂಟಿಂಗ್ ಗೆ ಬೃಹತ್ ಶೂಟಿಂಗ್ ಸೆಟ್ ನಿರ್ಮಾಣ: ಕಥೆ ಹೇಗಿರಲಿದೆ? - Mahanayaka

ಕಾಂತಾರ ಚಾಪ್ಟರ್ 1ರ ಶೂಟಿಂಗ್ ಗೆ ಬೃಹತ್ ಶೂಟಿಂಗ್ ಸೆಟ್ ನಿರ್ಮಾಣ: ಕಥೆ ಹೇಗಿರಲಿದೆ?

kantara chapter
01/05/2024

ಬೆಂಗಳೂರು:  ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್‌ 1(Kantara Chapter 1)ರ ಶೂಟಿಂಗ್‌ಗಾಗಿ ಕುಂದಾಪುರದಲ್ಲಿ ಬೃಹತ್‌ ಶೂಟಿಂಗ್‌ ಸೆಟ್‌ ನಿರ್ಮಾಣವಾಗುತ್ತಿದೆ.

ಸೆಟ್ ನಿರ್ಮಾಣಕ್ಕಾಗಿ ಮುಂಬೈ, ಹೈದರಾಬಾದ್‌ನಿಂದ ಸುಮಾರು 600 ಕಾರ್ಪೆಂಟರ್‌ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.  ಇದೇ ಸಮಯದಲ್ಲಿ ಸ್ಟಂಟ್‌ ಕೋ ಆರ್ಟಿ’ನೇಟರ್‌ ಗಳನ್ನೂ ಚಿತ್ರತಂಡ ತನ್ನ ಬಳಗಕ್ಕೆ ಸೇರಿಸಿಕೊಳ್ಳುತ್ತಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಈ ಸಿನಿಮಾದ ಪ್ರೀ ಪೊಡಕ್ಷನ್‌ ಕೆಲಸಗಳು ಮುಗಿದಿವೆ. ಇದೀಗ 20 ದಿನದ ಶೂಟಿಂಗ್‌ ಶೆಡ್ಯೂಲ್‌ ಆರಂಭಿಸುತ್ತಿದ್ದಾರೆ.  ಕಾಂತಾರ ಚಾಪ್ಟರ್‌ 1ರಲ್ಲಿ ನಟಿಸಲು ಆಯ್ಕೆಯಾದ ಕಲಾವಿದರಿಗೆ ತೀವ್ರ ತರಬೇತಿ ನೀಡಲಾಗುತ್ತಿದೆ.

ಕಾಂತಾರ ಸಿನಿಮಾಕ್ಕೆ ಕೆಲವು ದಿನಗಳ ಹಿಂದೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಈ ಕಲಾವಿದರಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ. ಅಜನೀಶ್‌ ಲೋಕನಾಥ್‌ ಸಂಗೀತ ಇರಲಿದೆ. ಕ್ಯಾಮೆರಾಮೆನ್‌ ಆಗಿ ಅರವಿಂದ್‌ ಕಶ್ಯಪ್‌ ಕೆಲಸ ಮಾಡಲಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಹೀರೋಯಿನ್‌, ವಿಲನ್‌ ಸೇರಿದಂತೆ ಇತರೆ ಪಾತ್ರದಾರಿಗಳ ವಿವರ ದೊರಕಿಲ್ಲ.

“ಪಂಜುರ್ಲಿ, ಗುಳಿಗ ದೈವದ ಮೂಲ ಕಥೆಯನ್ನು ಕಾಂತಾರ ಚಾಪ್ಟರ್‌ 1 ಸಿನಿಮಾ ಹೊಂದಿರಲಿದೆ.  ಹೀಗಾಗಿ ಈ ಚಿತ್ರದಲ್ಲಿ ಪುರಾತನ ವಿಷಯಗಳು ಇರಲಿವೆ” ಎಂದು ಚಿತ್ರತಂಡದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಉಳಿದಂತೆ ಕಾಂತಾರದ ಯಾವುದೇ ಅಪ್‌ಡೇಟ್‌ ಚಿತ್ರತಂಡದ ಕಡೆಯಿಂದ ಬಂದಿಲ್ಲ. ಚಿತ್ರದ ಸ್ಟೋರಿ, ಪಾತ್ರಗಳ ಕುರಿತು ಮಾಹಿತಿ ಸೋರಿಕೆಯಾಗದಂತೆ  ಚಿತ್ರತಂಡ  ಎಚ್ಚರಿಕೆ ವಹಿಸುತ್ತಿದೆ.

ಇನ್ನೂ ಕಾಂತಾರ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಚರ್ಚೆಗಳೂ ಇವೆ. ಸಾಯಿ ಪಲ್ಲವಿ, ಆಲಿಯಾ ಭಟ್‌, ಸಪ್ತಮಿ ಗೌಡ, ರುಕ್ಮಿಣಿ ವಸಂತ್‌ ರಲ್ಲಿ ಯಾರಾದರೂ ಒಬ್ಬರನ್ನು ಕಾಂತಾರಕ್ಕೆ ಹೀರೋಯಿನ್‌ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

ಚಿತ್ರದ ಕಥೆ ಏನಿರಬಹುದು ಎಂದು ಎಲ್ಲೂ ಚಿತ್ರತಂಡ ಬಾಯಿಬಿಟ್ಟಿಲ್ಲ. ಈ ಕುರಿತು ರಹಸ್ಯ ಕಾಪಾಡಿಕೊಳ್ಳಲು ಚಿತ್ರತಂಡ ಪ್ರಯತ್ನಿಸುತ್ತಿದೆ.  ಇನ್ನೂ ಕಾಂತಾರ ಚಾಪ್ಟರ್ 1 ಶೂಟಿಂಗೂ ಮೊದಲೇ ಹಲವು ವಿರೋಧಗಳನ್ನೂ ಕಟ್ಟಿಕೊಂಡಿದೆ. ಚಿತ್ರದಲ್ಲಿ ದೈವಗಳ ಪಾತ್ರಗಳನ್ನು ಬಳಸಿಕೊಳ್ಳದಂತೆ ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳು ಇತ್ತೀಚೆಗೆ ವಿರೋಧ ಮಾಡಿದ್ದರು. ಈ ವಿಚಾರ ಇದೀಗ ಕರಾವಳಿಯಲ್ಲಿ ಚರ್ಚೆಯಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ