ಕಾಂತಾರ ಚಿತ್ರ ನೋಡಿ 'ಇದು ರಿಷಬ್ ಮಾಡಿರುವ ಚಿತ್ರ ಅಲ್ಲ' ಅಂದ್ರು ಜಗ್ಗೇಶ್! - Mahanayaka
11:16 AM Saturday 23 - August 2025

ಕಾಂತಾರ ಚಿತ್ರ ನೋಡಿ ‘ಇದು ರಿಷಬ್ ಮಾಡಿರುವ ಚಿತ್ರ ಅಲ್ಲ’ ಅಂದ್ರು ಜಗ್ಗೇಶ್!

kambala
19/10/2022


Provided by

ಕನ್ನಡ ಚಿತ್ರ ಕಾಂತಾರ ಬಗ್ಗೆ ಹಿರಿಯ ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದು, ಈ ಚಿತ್ರವನ್ನು ದೇವರೇ ರಿಷಬ್ ಶೆಟ್ಟಿ ಕೈಯಿಂದ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು ಕಾರಣ ನನ್ನ ಬದುಕಿಗೆ ಸಕಲವು ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ. ಬಾಲ್ಯದಿಂದ ಕನ್ನಡ ಹಾಗೂ ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು ಕರುನಾಡ ದಾಟಿ ಹೊರಹೋಗದೆ ಬದುಕಿದವ ನಾನು..ಸದಾ ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಸದಾ ಹಂಬಲಿಸುವ ಜನ್ಮ ನನ್ನದು

ಇತ್ತೀಚಿನ ಚಿತ್ರ ಕಾಂತಾರ ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲಾ ಆದರೆ ನನ್ನ ಅಕ್ಕನ ಮಗ ಹಾಗೂ ನನ್ನ ಅನೇಕ ಚಿತ್ರ #ಗುರು #ಮೇಲುಕೋಟೆಮಂಜ ಚಿತ್ರದಲ್ಲಿ ಕಳನಟನಾಗಿ ಅಭಿನಯಿಸಿದ ಇಂದು ಅಮೇರಿಕದ ಡೆನ್ವರ್ ನಲ್ಲಿ ಒರ್ಯಾಕಲ್ ಸಂಸ್ಥೆಯಲ್ಲೆ ಶ್ರೇಷ್ಠ ಸ್ಥಾನದಲ್ಲಿರುವ ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು ನೋಡಿ ಬಂದೆ.

ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30ವರ್ಷದ ಅಭ್ಯಾಸ ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ ಆಧ್ಯಾತ್ಮಿಕ ಅನುಭವಕ್ಕೆ ಇದು ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ ನಿರ್ದೇಶಕ ರಿಷಭ್ ಶೆಟ್ಟಿ ಹುಟ್ಟಿಬಂದ ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ ಕಡೆಯ 25ನಿಮಿಷ ನಾನು ಎಲ್ಲಿರುವೆ ಮರೆತು ಹೋಯಿತು ಎಂದು ಜಗ್ಗೇಶ್ ಹೇಳಿದರು.

ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ ಮನಸ್ಸು ಹೊರಬಂದಾಗ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು. ನಂತರ ನನಗೆ ಅನ್ನಿಸಿದ್ದು ಇದು ವೃಷಭ್ ಮಾಡಿದ ಚಿತ್ರವಲ್ಲಾ ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ..ದೇವರು ನೂರ್ಕಾಲ ಆಯುಷ್ಯ ಆರೋಗ್ಯ ರಿಷಭನಿಗೆ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ. ಕಾಂತಾರ ಸಿನಿಮ ಅಲ್ಲಾ ರೋಮಾಂಚನ ಅನುಭವ ಎಂದು ವರ್ಣಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ