ಕರಡಿ ದಾಳಿಯಿಂದ ಬಾಲಕನನ್ನು ರಕ್ಷಿಸಿದ ನಾಯಿಗಳು | ಈ ಜಿಲ್ಲೆಯಲ್ಲಿ ನಡೆಯಿತು ಅಪರೂಪದ ಘಟನೆ - Mahanayaka
12:02 PM Wednesday 10 - December 2025

ಕರಡಿ ದಾಳಿಯಿಂದ ಬಾಲಕನನ್ನು ರಕ್ಷಿಸಿದ ನಾಯಿಗಳು | ಈ ಜಿಲ್ಲೆಯಲ್ಲಿ ನಡೆಯಿತು ಅಪರೂಪದ ಘಟನೆ

19/01/2021

ದಾವಣಗೆರೆ: 16 ವರ್ಷದ  ಬಾಲಕನ ಮೇಲೆ ಕರಡಿ ದಾಳಿ ನಡೆಸಿದ್ದು, ಈ ವೇಳೆ ನಾಯಿಗಳು ಬಾಲಕನನ್ನು ರಕ್ಷಿಸಿದ ಘಟನೆಯೊಂದು ಜಿಲ್ಲೆಯ ಜಗಳೂರು ತಾಲೂಕಿನ ಕಸ್ತೂರಿಪುರದಲ್ಲಿ ನಡೆದಿದೆ.

ಓಬಲೇಶ್(16) ಕರಡಿ ದಾಳಿಯಿಂದ ಪಾರಾದ ಬಾಲಕನಾಗಿದ್ದಾನೆ.  ಬೆಳಗ್ಗೆ ಜಮೀನಿಗೆ ನೀರು ಬಿಡಲು ತೆರಳಿದ್ದ ಬಾಲಕನ ಮೇಲೆ ಕರಡಿ ದಾಳಿ ನಡೆಸಿದೆ.  ಕರಡಿ ದಾಳಿ ನಡೆಸುವುದನ್ನು ಕಂಡ ಎರಡು ನಾಯಿಗಳು ಕರಡಿಯ ಮೇಲೆ ದಾಳಿ ನಡೆಸಿದ್ದು, ಕರಡಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ.

ನಾಯಿಗಳು ಬರದೇ ಇರುತ್ತಿದ್ದರೆ, ಬಾಲಕ ಕರಡಿ ದಾಳಿಗೆ ಬಲಿಯಾಗುತ್ತಿದ್ದ. ಕೆಲವೇ ಕೆಲವು ನಿಮಿಷಗಳ ಅಂತರದಲ್ಲಿ ಬಾಲಕ ಸಾವಿನ ದವಡೆಯಿಂದ ಪಾರಾಗಿದ್ದಾನೆ. ನಾಯಿಗಳು ಕರಡಿಯ ಮೇಲೆ ದಾಳಿ  ನಡೆಸುತ್ತಿದ್ದಂತೆಯೇ ಕರಡಿ, ಬಾಲಕನನ್ನು ಬಿಟ್ಟು ಕಾಡಿಗೆ ಓಡಿದೆ.

ಕರಡಿ ದಾಳಿಯಿಂದ ಬಾಲಕನಿಗೆ  ಗಾಯವಾಗಿದ್ದು, ಜಗಳೂರು ತಾಲೂಕು ಆಸ್ಪತ್ರೆಗೆ ಆತನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಯಿಗಳ ಸಮಯ ಪ್ರಜ್ಞೆಯಿಂದಾಗಿ ಬಾಲಕನ  ಪ್ರಾಣ ಉಳಿದೆ.

ಇತ್ತೀಚಿನ ಸುದ್ದಿ