ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಲಯನ್ಸ್ ಕ್ಲಬ್ ವತಿಯಿಂದ  ಕರಂಬಾರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ - Mahanayaka

ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಲಯನ್ಸ್ ಕ್ಲಬ್ ವತಿಯಿಂದ  ಕರಂಬಾರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

bajpe
09/09/2023


Provided by

ಬಜ್ಪೆ: ಹಳೆ ವಿದ್ಯಾರ್ಥಿ ಸಂಘ (ರಿ ) ಕರಂಬಾರು, ಶಾಲಾಭಿವೃದ್ಧಿ ಸಮಿತಿ ಮತ್ತು ಲಯನ್ಸ್ ಕ್ಲಬ್, ಮಂಗಳೂರು, ವೆಲೆನ್ಸಿಯ ಇದರ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ವೆಲೆನ್ಸಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಲೆಸ್ಲಿ ಡಿಸೋಜಾ  ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ದೇವಿ ತಾಂತ್ರಿಕ ಕಾಲೇಜು ಕೆಂಜಾರು ಇದರ HOD, MBA deptನ ಡಾ. ಗಾಯತ್ರಿ B.J. ಮಾತನಾಡಿ, ಶಿಕ್ಷಕರನ್ನು ಗೌರವಿಸಬೇಕು, ನನ್ನ ಜೀವನದ ಯಶಸ್ವಿಗೆ  ನನ್ನ ಶಿಕ್ಷಕರೇ ಪ್ರೇರಣೆ, ಶಿಕ್ಷಕರು ಈ ದೇಶವನ್ನು ನಿರ್ಮಿಸುವ ಶಿಲ್ಪಿಗಳು, ಶಿಕ್ಷಕರು ಮನಸ್ಸು ಮಾಡಿದರೆ ಯಾವ ವಿದ್ಯಾರ್ಥಿಯನ್ನು ಪರಿವರ್ತಿಸಬಹುದು ಎಂದು ಹೇಳಿದರು.

ಇದೇ ವೇಳೆ ಶಾಲಾ ಶಿಕ್ಷಕರು ಮತ್ತು ಅಕ್ಷರ ದಾಸೋಹ ಸಿಬ್ಬಂದಿಯನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ  ಸಮಿತಿಯ ಅಧ್ಯಕ್ಷ ರಾಘವೇಂದ್ರ ಎಸ್.,   ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಲಯನ್ಸ್ ಕ್ಲಬ್ ವೆಲೆನ್ಸಿಯದ ಕಾರ್ಯದರ್ಶಿ ವಲ್ಸ ಜೀವನ್, ಲಯನ್ಸ್ ಕ್ಲಬ್ ವೆಲೆನ್ಸಿಯದ ಕೋಶಾಧಿಕಾರಿ ಲಾರೆನ್ಸ್ ಸೇರಾವೊ, ನಿವೃತ್ತ ಸಿಂಜಿನ್ ಕಂಪನಿ ಮ್ಯಾನೇಜರ್ ರೋನಾಲ್ಡ್ ಮಸ್ಕೇರೆನ್ಹಸ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಗುಣಪಾಲ್ ದೇವಾಡಿಗ ಸ್ವಾಗತಿಸಿದರು, ರಾಕೇಶ್ ಕುಂದರ್ ನಿರೂಪಿಸಿ, ಪ್ರವೀಣ್ ಆಚಾರ್ಯ ವಂದಿಸಿದರು.

ಇತ್ತೀಚಿನ ಸುದ್ದಿ