ಕಾರ್ಕಳ: ಹಾಡಹಗಲೇ ಘರ್ಜಿಸುತ್ತಿರುವ ಹುಲಿ: ಭಯಭೀತರಾದ ಸ್ಥಳೀಯರು - Mahanayaka
10:13 AM Saturday 23 - August 2025

ಕಾರ್ಕಳ: ಹಾಡಹಗಲೇ ಘರ್ಜಿಸುತ್ತಿರುವ ಹುಲಿ: ಭಯಭೀತರಾದ ಸ್ಥಳೀಯರು

tiger
22/07/2023


Provided by

ಕಾರ್ಕಳ: ತಾಲೂಕಿನ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗುಡ್ಡೆ ಬಳಿ ಇಂದು ( ಶನಿವಾರ ) ಮಧ್ಯಾಹ್ನ ಸುಮಾರಿಗೆ ಹುಲಿ ಘರ್ಜಿಸುವುದು ಕೇಳಿ ಬಂದಿದೆ ಎಂದು ಮಹಾನಾಯಕಕ್ಕೆ ಇಲ್ಲಿನ ಸ್ಥಳೀಯರು ತಿಳಿಸಿದ್ದಾರೆ.

ಇಲ್ಲಿನ ಜಾರ್ಜ್ ಎಂಬವರ ಮನೆ ಸಮೀಪ ಹುಲಿ ಘರ್ಜಿಸುವುದು ಕೇಳಿ ಬಂದಿದ್ದು, ಇದರಿಂದ ಮನೆಯವರು ಹಾಗೂ ಸ್ಥಳೀಯರು ಭಯಬೀತರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಇಲ್ಲಿನ ಸುತ್ತಮುತ್ತಲಿನ ಪರಿಸರದಿಂದ ನಾಯಿಗಳನ್ನು ಹುಲಿ ಹೊತ್ತೋಯ್ದಿದೆ. ಮೂರು ದಿನಗಳ ಹಿಂದೆ ರೆಂಜಾಳದ ಗೋಳಿದಡಿ ಸಮೀಪದ ಕೃಷ್ಣ ಪೂಜಾರಿ ಎಂಬವರ ಮನೆಯ ಮುಂಭಾಗದಲ್ಲಿಯೇ ನಾಯಿಯೊಂದನ್ನು ಹೊತ್ತೊಯ್ದಿದೆ ಎಂದು ಇಲ್ಲಿನ ನಾಗರಿಕರು ದೂರಿದ್ದಾರೆ.

ಹುಲಿ ಭೀತಿಯಿಂದ ಇಲ್ಲಿನ ರಸ್ತೆಯಲ್ಲಿ ಶಾಲಾ ಮಕ್ಕಳು ಸಾರ್ವಜನಿಕರು ನಡೆದಾಡಲು ಭಯಪಡುವಂತಾಗಿದೆ. ಈ ವ್ಯಾಪ್ತಿಯಲ್ಲಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಜನರು ನಡೆದುಕೊಂಡೆ ಪೇಟೆಗೆ ಹೋಗಬೇಕಾಗಿದೆ. ಅಲ್ಲದೆ ಕೃಷಿಕರು ಹೆಚ್ಚಾಗಿ ಇರುವುದರಿಂದ ಸೊಪ್ಪು ತರಲು ಹಾಡಿಗೆ ಹೋಗಲು ಭಯಪಡುವಂತಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಯವರು ತಕ್ಷಣ ಕ್ರಮ ತೆಗೆದುಕೊಂಡು ಹುಲಿಯನ್ನು ಹಿಡಿದು ಜನರ ಪ್ರಾಣಹಾನಿಯಾಗುವುದನ್ನು ತಪ್ಪಿಸಬೇಕಾಗಿ ಕೃಷಿ ಕಿಸಾನ್ ರಕ್ಷಣಾ ಸಂಘ ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ