ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಕೆ.ಎಸ್.ಅಜಯ್ ಕುಮಾರ್ ಆಯ್ಕೆ - Mahanayaka
5:35 AM Saturday 17 - January 2026

ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಕೆ.ಎಸ್.ಅಜಯ್ ಕುಮಾರ್ ಆಯ್ಕೆ

k s ajay kumar
08/07/2021

ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜನಪರ ಒಕ್ಕೂಟ ಚಿಕ್ಬಳ್ಳಾಪುರ ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಕೆ. ಆರ್. ಅಜಯ್ ಕುಮಾರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಜಿಲ್ಲಾ ಅಧ್ಯಕ್ಷರಾದ ಎಂ.ಹನುಮಂತಪ್ಪ ಮತ್ತು ಸಮಿತಿ ನೇಮಕಾತಿ ಆದೇಶವನ್ನು ಬಿ.ಬಿ. ರಸ್ತೆಯ ಜಿಲ್ಲಾ ಕಚೇರಿಯಲ್ಲಿ ನೀಡಲಾಯಿತು.

ನೂತನವಾಗಿ ಆಯ್ಕೆ ಆದ ಅಧ್ಯಕ್ಷರಿಗೆ ಕೆಲವು ಹಕ್ಕು, ಕರ್ತವ್ಯಗಳ ಬಗ್ಯೆ ತಿಳಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಹನುಮಂತಪ್ಪ ವಯಿಸಿದ್ದರು ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಕಾರ್ಯಾಧ್ಯಕ್ಷರಾದ ಶ್ರೀಧರ್ ಕಳವಾರ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಎನ್. ಮೋಹನ್ ಮುರಳಿ, ಜಿಲ್ಲಾ ಕಾರ್ಯದರ್ಶಿ ಸ್ವಾಮಿನಾಥನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ನರ್ಮದಾ ರೆಡ್ಡಿ, ಜಿಲ್ಲಾ ಕೋಶಾಧ್ಯಕ್ಷರಾದ ಕುಂಬಿ ನರಸಿಂಹಮೂರ್ತಿ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸುರೇಶ್, ಗೀತಾ, ಸವಿತಾ ರೆಡ್ಡಿ, ರಾಜೇಶ್ ಜೈನ್ ಮುಂತಾದವರು ಭಾಗವಯಿಸಿದ್ದರು ಕಾರ್ಯಕ್ರಮದ ಅಂತಿಮವಾಗಿ ಗೀತಾ ರವರು ವಂದನೆಗಳೊಂದಿಗೆ ಮುಕ್ತಾಯ ಮಾಡಲಾಯಿತು.

ಇತ್ತೀಚಿನ ಸುದ್ದಿ