ಮೇ10 ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ:ಇಂದಿನಿಂದಲೇ ನೀತಿ ಸಂಹಿತೆ:ಮೇ13 ರಂದು ಫಲಿತಾಂಶ - Mahanayaka
7:24 PM Thursday 11 - September 2025

ಮೇ10 ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ:ಇಂದಿನಿಂದಲೇ ನೀತಿ ಸಂಹಿತೆ:ಮೇ13 ರಂದು ಫಲಿತಾಂಶ

karnattaka
29/03/2023

ನವದೆಹಲಿ/ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು,ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಳ್ಳಲಿದೆ.


Provided by

ನವದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಮೂಲಕ ವಿವರಣೆ ನೀಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ,ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಹೊರಬೀಳುತ್ತಿದ್ದು,
ಚುನಾವಣೆಗೆ ಅಧಿಸೂಚನೆ ಏ.13 ಪ್ರಕಟವಾಗಲಿದ್ದು, ಒಂದೇ ಹಂತದಲ್ಲಿ ಮತದಾನವಾಗಲಿದೆ ಮೇ 10 ಬುಧವಾರ ಮತದಾನ , ಮೇ13 ಶನಿವಾರ ಮತ ಎಣಿಕೆ ನಡೆಯಲಿದೆ ಎಂದರು.

ಕರ್ನಾಟಕದಲ್ಲಿ 5.21 ಕೋಟಿ ಕರ್ನಾಟಕದ ಅರ್ಹ ಮತದಾರರು, 12.15 ಲಕ್ಷ 80 ವರ್ಷ ಮೇಲ್ಪಟ್ಟ ಮತದಾರರುಮೊದಲ ಬಾರಿಗೆ ಮತದಾನ ಮಾಡುತ್ತಿರುವವರು 9.17 ಲಕ್ಷ ಮಂದಿಯಿದ್ದಾರೆ.ಇದರಲ್ಲಿ 4699 ತೃತೀಯ ಲಿಂಗಿ ಮತದಾರರು, 12,000 ಸೂಕ್ಷ್ಮ ಮತಗಟ್ಟೆಗಳು, 58,282 ರಾಜ್ಯದಲ್ಲಿನ ಒಟ್ಟು ಮತಗಟ್ಟೆಗಳು,24,063 ನಗರಪ್ರದೇಶದ ಮತಗಟ್ಟೆಗಳು, 34,291 ಗ್ರಾಮೀಣ ಮತಗಟ್ಟೆಗಳನ್ನು ನಿರ್ಮಿಸಲಾಗುವುದು.ಇನ್ನು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪ್ರಯೋಗ ಇದಾಗಿದೆ.

ಮೇ 23 ರೊಳಗೆ ನೂತನ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ. ಮೊದಲ ಬಾರಿಗೆ ಮತದಾನ 9.17 ಲಕ್ಷ ಮತದಾರರು ಮತಚಲಾಯಿಸಲಿದ್ದಾರೆ.ವಿಕಲಚೇತನ ಮತದಾರರು 5.55 ಲಕ್ಷ, ಶತಾಯುಷಿಗಳು- 16 ಸಾವಿರ ಜನರಿದ್ದಾರೆ. 400ಕ್ಕೂ ಅಧಿಕ ಪರಿಸರ ಸ್ನೇಹಿ ಮತಗಟ್ಟೆಗಳ ಸ್ಥಾಪನೆ,ಪ್ರತಿ ಮತಗಟ್ಟೆಯಲ್ಲಿ 883 ಜನರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.ಹಾಗೆಯೇ ಮಹಿಳೆಯರಿಗಾಗಿಯೇ 1,320 ಮತಗಟ್ಟೆಗಳು,ಗುಡ್ಡಗಾಡು ಜನರಿಗಾಗಿ 40ಕ್ಕೂ ಹೆಚ್ಚು ಮತದಾನ ಕೇಂದ್ರಗಳಿವೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ ಮುಂದಾಗಿದ್ದು, ಬೆಂಗಳೂರಿನಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲು ಬಗ್ಗೆ ಆಯೋಗ ಕಳವಳ ವ್ಯಕ್ತವಾಗಿದೆ.

ಎಲೆಕ್ಟ್ರಾನ್ನ್- ಮತದಾರರ ಹೆಸರು ನೋಂದಣಿ, ಚಲಾವಣೆಗೆ ಜಾಗೃತಿ. ತಂತ್ರಜ್ಞಾನ ಬಳಕೆಗೆ ಒತ್ತು. ಐಟಿಬಿಟಿ, ಸ್ಟಾರ್ಟಪ್, ಇನ್ನೋವೇಷನ್ ಇತ್ಯಾದಿ ಕ್ಷೇತ್ರದ ಯುವಜನರಿಗೆ ಉತ್ತೇಜನ, ಯುವಕರಿಂದಲೇ 224 ಮತಗಟ್ಟೆಗಳ ನಿರ್ವಹಣೆ, ಮತಗಟ್ಟೆಗೆ ಯುವಜನರನ್ನು ಸೆಳೆಯಲು ವಿವಿಗಳ ಬಳಕೆ,ಅಭ್ಯರ್ಥಿಗಳ ಮಾಹಿತಿ, ಪ್ರಮಾಣಪತ್ರ ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯ, ಆ್ಯಪ್ ನಲ್ಲೂ ಅಭ್ಯರ್ಥಿಗಳ ಮಾಹಿತಿ, ಪ್ರಮಾಣಪತ್ರ ಅಪ್ಲೋಡ್. ಮತದಾರರು ದೂರು ಸಲ್ಲಿಸುವುದಕ್ಕೂ ಅವಕಾಶ ಕಲ್ಪಿಸುವುದಾಗಿ ಆಯುಕ್ತರು ತಿಳಿಸಿದ್ದಾರೆ.

ಚುನಾವಣಾ ಅಕ್ತಮ ತಡೆಗೆ ಜೀರೋ ಟಾಲರೆನ್ಸ್. 2,400 ತಂಡಗಳ ರಚನೆ, ಎಲ್ಲ ತನಿಖಾ ಸಂಸ್ಥೆಗಳ ಬಳಕೆಗೆ ಆಯೋಗ ಮುಂದಾಗಿದ್ದು, ಚುನಾವಣಾ ಅಕ್ರಮಕ್ಕೆ ನಿಷ್ಠುರ ಕಡಿವಾಣ,ವಿಮಾನನಿಲ್ದಾಣ ಸಹಿತ ಎಲ್ಲೆಡೆ ವ್ಯಾಪಕ ಮತ್ತು ತೀವ್ರ ನಿಗಾಕ್ಕೆ ನಿರ್ದೇಶನ ಹಾಗೂ ರಾಜ್ಯದ 19 ಜಿಲ್ಲೆಗಳಲ್ಲಿ 171 ಅಂತಾರಾಜ್ಯ ಚೆಕ್ ಪೋಸ್ಟ್ ಗಳ ಸ್ಥಾಪನೆಗೆ ಕ್ರಮ ವಹಿಸವುದಾಗಿ ಆಯೋಗ ಸ್ಪಷ್ಟಪಡಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ