ಉಚ್ಛಾಟನೆ ಮಾಡಿ ಬಿಸಾಕಿ: ಯತ್ನಾಳ್ ವಿರುದ್ಧ ಬುಸುಗುಟ್ಟಿದ ವಿಜಯೇಂದ್ರ ಬಣ - Mahanayaka

ಉಚ್ಛಾಟನೆ ಮಾಡಿ ಬಿಸಾಕಿ: ಯತ್ನಾಳ್ ವಿರುದ್ಧ ಬುಸುಗುಟ್ಟಿದ ವಿಜಯೇಂದ್ರ ಬಣ

yathnal
30/11/2024


Provided by

ಮೈಸೂರು: ಬಿಜೆಪಿಯಲ್ಲಿ ಬಣರಾಜಕೀಯ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಇದೀಗ ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣವು ಬುಸುಗುಟ್ಟಿದ್ದು, ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಬಿಸಾಕಿ ಎಂದು ಆಗ್ರಹಿಸಿದೆ.

ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯ ಬಳಿಕ ವಿಜಯೇಂದ್ರ ಬಣ ಫುಲ್ ಆಕ್ಟೀವ್ ಆಗಿದೆ.  ವಿಜಯೇಂದ್ರ ಬಣದ ನಾಯಕರ ಸುದ್ದಿಗೋಷ್ಠಿ ವೇಳೆ ಕಾರ್ಯಕರ್ತರು ಯತ್ನಾಳ್ ಬಣದ ವಿರುದ್ಧ ತೀವ್ರ ರೋಷಾವೇಶ ವ್ಯಕ್ತಪಡಿಸಿದರು.

ಇದೀಗ ರಾಜ್ಯಾದ್ಯಂತ ದೇಗುಲ ಭೇಟಿ  ಆರಂಭಿಸಿರುವ ವಿಜಯೇಂದ್ರ ಪಡೆಯ ನಾಯಕರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್, ಕಟ್ಟಾ ಸುಬ್ರಹ್ಮಣ್ಯ ನಾಯ್ದು ಸೇರಿದಂತೆ ಹಲವು ನಾಯಕರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

ಇದೇ ವೇಳೆ ಮಾತನಾಡಿರುವ ಎಂ.ಪಿ.ರೇಣುಕಾಚಾರ್ಯ, ಪಕ್ಷದೊಳಗಿನ ದುಷ್ಟ ಶಕ್ತಿಗಳ ಸಂಹಾರವಾಗುತ್ತದೆ. ಯತ್ನಾಳ್ ಉಚ್ಛಾಟನೆ ಆಗಲಿದೆ ಕಾದು ನೋಡಿ ಎಂದಿದ್ದಾರೆ.

ದೆಹಲಿಯಲ್ಲಿರುವ ವಿಜಯೇಂದ್ರ ಯತ್ನಾಳ್ ಉಚ್ಛಾಟನೆಗೆ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಯಾಗಲು ಕ್ಷಣಗಣನೆ ಆರಂಭಗೊಂಡಿದೆಯೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ